ಇಂದು(ನವೆಂಬರ್ 7) ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ: ಕ್ಯಾನ್ಸರ್‌ ಮಹಾಮಾರಿಗೆ ಬೇಕು ಕಡಿವಾಣ

0
26

ಜನರಲ್ಲಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಪ್ರತಿವರ್ಷ ನವೆಂಬರ್.7ರಂದು ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮನುಕುಲಕ್ಕೆ ಅಂಟಿದ ಬಹುದೊಡ್ಡ ಕಾಯಿಲೆಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಈ ಭಯಾನಕ ಕಾಯಿಲೆಗೆ ತುತ್ತಾದ ರೋಗಿ ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ಕ್ಯಾನ್ಸರ್‌ ಬಂದರೆ ಸಾವು ನಿಶ್ಚಿತ ಎಂಬ ಭಾವನೆ ಜನರಲ್ಲಿ ಬೇರುಬಿಟ್ಟಿದೆ. ಆದರೆ ಆರಂಭದಲ್ಲೇ ಎಚ್ಚರಿಕೆಯಿಂದಿದ್ದರೆ ಬಹಳಷ್ಟು ಮಟ್ಟಿಗೆ ರೋಗ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಕ್ಯಾನ್ಸರ್‌ ಜಾಗೃತಿ ಮಹತ್ವದ್ದು.

ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ
ಜನರಲ್ಲಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಯಾರ ಮುಂದಾಳತ್ವ
ಭಾರತ ಸರಕಾರ 1975ರಲ್ಲಿ ರಾಷ್ಟ್ರೀಯ ಕ್ಯಾನ್ಸರ್‌ ನಿಯಂತ್ರಣ ಯೋಜನೆಯನ್ನು ಜಾರಿಗೆ ತರುವ ಮೂಲಕ ಇಂಥ ದಿನಾಚರಣೆಯನ್ನು ಪ್ರಾರಂಭಿಸಿತ್ತು.

ನಿಯಂತ್ರಣವೇ ಉದ್ದೇಶ
ಪ್ರಾಥಮಿಕ ಹಂತದಲ್ಲಿಯೇ ಈ ಒಂದು ಕಾಯಿಲೆಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣ ಮಾಡುವುದು. ಹಾಗೂ ಕಾಯಿಲೆಗೆ ತುತ್ತಾದವರಿಗೆ ಅಗತ್ಯ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವುದು ಇದರ ಪ್ರಮುಖ ಉದ್ದೇಶ.

4 ಲಕ್ಷ
ಕಳೆದ ವರ್ಷ ಕ್ಯಾನ್ಸರ್‌ಗೆ ಒಟ್ಟು 4,13,519 ಪುರುಷರು ಬಲಿಯಾಗಿದ್ದಾರೆ.

ಶೇ. 6.28
ಕ್ಯಾನ್ಸರ್‌ನಿಂದ 75 ವರ್ಷಕ್ಕೂ ಮುನ್ನ ಸಾಯುತ್ತಿರುವ ಮಹಿಳೆಯರು.

3 ಲಕ್ಷ
ಕಳೆದ ವರ್ಷ ಕೇವಲ ತಂಬಾಕು ಸೇವನೆ ಯಿಂದ ಒಟ್ಟು 3,17,928 ಪುರುಷರು ಮತ್ತು ಮಹಿಳೆಯರು ಸಾವನ್ನಪ್ಪಿದ್ದಾರೆ.

ಪ್ರತಿದಿನ 3,500 ಸಾವು
ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್‌ಗೆ ತುತ್ತಾಗಿ ಪ್ರತಿದಿನ ದೇಶದಲ್ಲಿ 3,500 ಮಂದಿ ಮರಣ ಹೊಂದುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಶೇ. 7.34
75 ವರ್ಷಕ್ಕಿಂತ ಮೊದಲು ಕ್ಯಾನ್ಸರ್‌ಗೆ ತುತ್ತಾಗಿ ಬಲಿಯಾ ಗುತ್ತಿರುವ ಪುರುಷರ ದತ್ತಾಂಶ.

11 ಲಕ್ಷ
ಪ್ರತಿ ವರ್ಷ ದೇಶದಲ್ಲಿ 11,57,294 ಹೊಸ ಪ್ರಕರಣಗಳು ದಾಖಲಾಗುತ್ತಿವೆ.

7 ಲಕ್ಷ
ಪ್ರತಿ ವರ್ಷ ದೇಶದಲ್ಲಿ ಕ್ಯಾನ್ಸರ್‌ ರೋಗಕ್ಕೆ 7,84,821 ಜನರು ಬಲಿಯಾಗುತ್ತಿದ್ದಾರೆ.

22.5 ಲಕ್ಷ
ದೇಶದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರು.

2 ನೇ ಸ್ಥಾನ
ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳ ಪೈಕಿ ರಾಜ್ಯ 2ನೇ ಸ್ಥಾನದಲ್ಲಿದ್ದು, ಶೇ.6 ಪಟ್ಟು ಹೆಚ್ಚಳವಾಗಿದೆ.

8 ನಿಮಿಷಕ್ಕೆ ಒಂದು ಸಾವು
ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಓರ್ವ ಮಹಿಳೆ ಗರ್ಭಕೋಶ ಕ್ಯಾನ್ಸರ್‌ನಿಂದ ಸಾಯುತ್ತಿದ್ದು, ಹೊಸದಾಗಿ ದಾಖಲಾಗುವ ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆ ಮೃತಪಡುತ್ತಿದ್ದಾಳೆ.

ಮಹಿಳೆಯರೆಷ್ಟು?
ಕಳೆದ ಸಾಲಿನಲ್ಲಿ 302 ಮಹಿಳೆಯರು ಕ್ಯಾನ್ಸರ್‌ ಕಾಯಿಲೆಯಿಂದ ಅಸುನೀಗಿದ್ದಾರೆ.

ಅರಿವಿನ ಕೊರತೆ
ಕ್ಯಾನ್ಸರ್‌ ಹೆಚ್ಚಳಕ್ಕೆ ಹಲವಾರು ಕಾರಣವಾಗಿದ್ದು, ರೋಗಿಗಳಿಗೆ ತತ್‌ಕ್ಷಣದ ಚಿಕಿತ್ಸೆ ಬೇಕಾಗುತ್ತದೆ. ಮಾನಸಿಕ ಖನ್ನತೆ, ಭಯ ಮತ್ತಷ್ಟು ಅವರನ್ನು ಕುಗಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಮನೋಸ್ಥೈರ್ಯ ಹಾಗೂ ಸಕಾರಾತ್ಮಕ ವಾತಾವರಣದ ಅವಶ್ಯವಿರುತ್ತದೆ. ಆದರೆ ಗುಣಲಕ್ಷಣಗಳ ಮಾಹಿತಿ ಕುರಿತು ಜನರಿಗೆ ಮಾಹಿತಿ ಇಲ್ಲದೇ ಇರುವುದರ ಕಾರಣ ಪ್ರಕರಣ ಹೆಚ್ಚುತ್ತಿದೆ.

ಕ್ಯಾನ್ಸರ್‌ ಲಕ್ಷಣಗಳು
ಕಾಯಿಲೆಯ ಕಾರಣಗಳು ನಿರ್ದಿಷ್ಟ ಕ್ಯಾನ್ಸರ್‌ ವಿಧದ ಮೇಲೆ ಅವಲಂಬಿತವಾಗಿವೆ. ಅದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೂಲಕ ಕ್ಯಾನ್ಸರ್‌ ಲಕ್ಷಣ ಗುರುತಿಸಬಹುದು.

ನಿಯಂತ್ರಣ ಹೇಗೆ?
# ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಬೇಕು.
 ದಿನನಿತ್ಯದ ಆಹಾರ ಕ್ರಮದಲ್ಲಿ ಅವಶ್ಯವಿರುವ ಪೌಷ್ಟಿಕಾಂಶ ಮತ್ತು ವಿಟಮಿನ್‌ ಆಹಾರಗಳನ್ನು ಸೇವಿಸಿ.
 ಜಂಕ್‌ಫ‌ುಡ್‌ ಸೇವನೆಯಿಂದ ದೂರವಿರಿ.
#  ತಂಬಾಕು ಸೇವನೆ, ಧೂಮಪಾನ ಹಾಗೂ ಮದ್ಯಪಾನ ಬೇಡ.
 ನಿಯಮಿತವಾಗಿ ನಿದ್ದೆ ಮಾಡಿ.
 ಪ್ರತಿದಿನ ವ್ಯಾಯಾಮ ಹಾಗೂ ವಾಕಿಂಗ್‌ ಮಾಡುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಿ.
# ಮಹಿಳೆಯರು ನಿಗದಿತ ಸಮಯಕ್ಕೂ ಮುನ್ನವೇ ಮಕ್ಕಳಿಗೆ ಹಾಲೂಡಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಡಿ.
#  ಆರೋಗ್ಯದಲ್ಲಿ ಏರಿಳಿತವಾಗುತ್ತಿದ್ದರೆ ತತ್‌ ಕ್ಷಣ ವೈದ್ಯರನ್ನು ಸಂಪರ್ಕಿಸಿ .

ಟಾಪ್‌ 5 ರಾಜ್ಯಗಳು
·  ಗುಜರಾತ್‌   – 72,169
·  ಕರ್ನಾಟಕ    – 20,084
·  ಮಹಾರಾಷ್ಟ್ರ  – 14,103
·  ತೆಲಂಗಾಣ    – 13,130
·  ಪ.ಬಂಗಾಲ   – 11,897
·  ಕೇರಳ        – 10,404

ಸಾಮಾನ್ಯ ವಿಧಗಳು
ಪುರುಷರು
· ತುಟಿ ಹಾಗೂ ಬಾಯಿ ಕ್ಯಾನ್ಸರ್‌
·  ಶ್ವಾಸಕೋಶ ಕ್ಯಾನ್ಸರ್‌
·  ಹೊಟ್ಟೆ ಕ್ಯಾನ್ಸರ್‌
·  ಕರುಳಿನ ಕ್ಯಾನ್ಸರ್‌
·  ಅನ್ನನಾಳದ ಕ್ಯಾನ್ಸರ್‌

ಮಹಿಳೆಯರು
·  ಸ್ತನ ಕ್ಯಾನ್ಸರ್‌
·  ತುಟಿ/ಗಂಟಲು ಕ್ಯಾನ್ಸರ್‌
·  ಗರ್ಭಕೋಶ ಕ್ಯಾನ್ಸರ್‌
·  ಶ್ವಾಸಕೋಶ ಕ್ಯಾನ್ಸರ್‌
·  ಹೊಟ್ಟೆ ಕ್ಯಾನ್ಸರ್‌

16 ಲಕ್ಷ ಪ್ರಕರಣಗಳು
ದೇಶದಲ್ಲಿ ಕ್ಯಾನ್ಸರ್‌ ಎರಡನೇ ಅತಿದೊಡ್ಡ ಕಾಯಿಲೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಕಳೆದ ವರ್ಷ 16 ಲಕ್ಷ ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿವೆ.

ಶೇ. 112ಹೆಚ್ಚಳ
ಲ್ಯಾನ್ಸೆಟ್‌ ಆರೋಗ್ಯ ಸಂಸ್ಥೆ ವರದಿ ನೀಡಿದ ಮಾಹಿತಿ ಪ್ರಕಾರ 1990 ಮತ್ತು 2016ರ ನಡುವೆ ಕ್ಯಾನ್ಸರ್‌ನಿಂದ ಮೃತಪಟ್ಟವರಲ್ಲಿ ಶೇ. 112ರಷ್ಟು ಹೆಚ್ಚಾಗಿದೆ.

ಶೇ. 48.7 ಏರಿಕೆ ಪ್ರಮಾಣ
ಕಳೆದ ವರ್ಷ ಕ್ಯಾನ್ಸರ್‌ ಪ್ರಕರಣಗಳ ಪ್ರಮಾಣ ದಲ್ಲಿ ಶೇ. 48.7ರಷ್ಟು ಹೆಚ್ಚಾಗಿದೆ ಎಂದು ಲ್ಯಾನ್ಸೆಟ್‌ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಬದಲಾದ ಬದುಕಿನ ಶೈಲಿ
ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಲು ಬದಲಾದ ಬದುಕಿನ ಶೈಲಿ ಕಾರಣ. ತಂಬಾಕು ಹಾಗೂ ಧೂಮಪಾನ ಸೇವನೆಯಿಂದ ದೂರವಿರುವುದು ಇದಕ್ಕೆ ಸೂಕ್ತ ಪರಿಹಾರವಾಗಿದ್ದು, ಹೆಚ್ಚುತ್ತಿರುವ ಪ್ರಕರಣಗಳನ್ನು ನಿಯಂತ್ರಿಸ ಬಹುದು.
– ಡಾ| ಕೃಷ್ಣ ಶರಣ್‌, ವಿಭಾಗದ ಮುಖ್ಯಸ್ಥರು ರೆಡಿಯೋ ಥೆರಾಪಿ ಮತ್ತು ಆಂಕಾಲಜಿ ವಿಭಾಗ ಕೆ.ಎಂ.ಸಿ, ಮಣಿಪಾಲ

ರೋಗಕ್ಕೆ ಕಡಿವಾಣ
ಕ್ಯಾನ್ಸರ್‌ ರೋಗವನ್ನು ಪ್ರಾರಂಭಿಕ ಹಂತದಲ್ಲಿ ತಡೆಗಟ್ಟಬಹುದು. ಯಾವುದೇ ಭಯ ಬೇಡ. ಸರಿಯಾದ ಸಮಯಕ್ಕೆ ತಜ್ಞರನ್ನು ಸಂಪರ್ಕಿಸುವುದರಿಂದ ಈ ರೋಗಕ್ಕೆ ಕಡಿವಾಣ ಹಾಕಬಹುದು.
ಡಾ| ಪ್ರಶಾಂತ.ಬಿ, ರಕ್ತ ಶಾಸ್ತ್ರ ತಜ್ಞರು, ಕೆ.ಎಂ.ಸಿ ಮಂಗಳೂರು