ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ: ಪ್ರವಾಸಿಗರಿಗೆ 10 ಭಾಷೆಗಳಲ್ಲಿ ಮಾಹಿತಿ

0
359

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಐಜಿಐ) ಪ್ರವಾಸಿಗರಿಗೆ 10 ಭಾಷೆಗಳಲ್ಲಿ ಮಾಹಿತಿ ನೀಡುವ ವಿಶೇಷ ವಿಭಾಗವೊಂದನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ. ಪ್ರವಾಸೋದ್ಯಮ ಸಚಿವಾಲಯದ ರಾಜ್ಯಖಾತೆ ಸಚಿವ ಕೆ.ಜೆ.ಆಲ್ಫೊನ್ಸ್ ಅವರು ಈ ವಿಭಾಗಕ್ಕೆ ಚಾಲನೆ ನೀಡಿದ್ದಾರೆ. ಒಬ್ಬರು ಮೇಲ್ವಿಚಾರಕ, ಇಬ್ಬರು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ನವದೆಹಲಿ (ಪಿಟಿಐ): ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಐಜಿಐ) ಪ್ರವಾಸಿಗರಿಗೆ 10 ಭಾಷೆಗಳಲ್ಲಿ ಮಾಹಿತಿ ನೀಡುವ ವಿಶೇಷ ವಿಭಾಗವೊಂದನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ.  ಪ್ರವಾಸೋದ್ಯಮ ಸಚಿವಾಲಯದ ರಾಜ್ಯಖಾತೆ ಸಚಿವ ಕೆ.ಜೆ.ಆಲ್ಫೊನ್ಸ್ ಅವರು ಈ ವಿಭಾಗಕ್ಕೆ ಚಾಲನೆ ನೀಡಿದ್ದಾರೆ. ಒಬ್ಬರು ಮೇಲ್ವಿಚಾರಕ, ಇಬ್ಬರು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 

‘ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಪ್ರವಾಸಿಗರಿಗೆ 24×7 ಮಾಹಿತಿ ಒದಗಿಸುವ ಉದ್ದೇಶದಿಂದ ಈ ಸೌಲಭ್ಯ ಆರಂಭಿಸಲಾಗಿದೆ. ಪ್ರವಾಸೋದ್ಯಮ ಸಾಹಿತ್ಯ ಹಾಗೂ ಆ ಸಂಬಂಧದ ಪ್ರಕಟಣೆಗಳು ಸಹ ವಿಭಾಗದಲ್ಲಿ ಲಭ್ಯವಿರಲಿದೆ.1363 ಸಹಾಯವಾಣಿ ಮೂಲಕ ಸಂಪರ್ಕಿಸಬಹುದು’ ಎಂದು ಪ್ರವಾಸೋದ್ಯಮ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.