ಇಂದಿನಿಂದ ‘ಅರ್ಧ ಕುಂಭ ಮೇಳ’

0
391

ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ 2019 ಜನೇವರಿ 15 ರ ಮಂಗಳವಾರ ಆರಂಭವಾಗಲಿದೆ.

ಲಖನೌ (ಪಿಟಿಐ): ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ  2019  ಜನೇವರಿ 15 ರ ಮಂಗಳವಾರ ಆರಂಭವಾಗಲಿದೆ.

12 ವರ್ಷಕ್ಕೊಮ್ಮೆ ನಡೆಯುವ ಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನಲಾಗುತ್ತದೆ.

ಮಕರ ಸಂಕ್ರಾತಿಯಂದು ಲಕ್ಷಾಂತರ ಜನರು ಬೆಳಿಗ್ಗೆ 4ರಿಂದ ಸಂಜೆ 5ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯಲಿವೆ. ಮಾರ್ಚ್ 4ರಂದು ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ತೆರೆ ಬೀಳಲಿದೆ.