ಇಂದಿನಿಂದ(ಅಕ್ಟೋಬರ್ 5ರಿಂದ) ಅಂಧರ ತ್ರಿಕೋನ ಕ್ರಿಕೆಟ್‌ ಸರಣಿ

0
503

ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಕ್ಯಾಬಿ) ಮತ್ತು ಸಮ ರ್ಥನಂ ಸಂಸ್ಥೆ ಆಯೋಜಿಸಿರುವ ಅಂಧರ ತ್ರಿಕೋನ ಕ್ರಿಕೆಟ್ ಸರಣಿ ಅಕ್ಟೋಬರ್‌ 5ರಿಂದ 13ರ ವರೆಗೆ ನಡೆಯಲಿದೆ. ನಗರದ ಥಣಿಸಂದ್ರದಲ್ಲಿರುವ ಸಂಪ್ರಸಿದ್ಧಿ ಕ್ರೀಡಾಂಗಣದಲ್ಲಿ ಮೊದಲ ಎರಡು ಪಂದ್ಯಗಳು ನಡೆಯಲಿದ್ದು ನಂತರ ಗೋವಾದಲ್ಲಿ ಹಣಾಹಣಿ ನಡೆಯಲಿದೆ.

ಬೆಂಗಳೂರು: ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಕ್ಯಾಬಿ) ಮತ್ತು ಸಮ ರ್ಥನಂ ಸಂಸ್ಥೆ ಆಯೋಜಿಸಿರುವ ಅಂಧರ ತ್ರಿಕೋನ ಕ್ರಿಕೆಟ್ ಸರಣಿ ಅಕ್ಟೋಬರ್‌ 5ರಿಂದ 13ರ ವರೆಗೆ ನಡೆಯಲಿದೆ. ನಗರದ ಥಣಿಸಂದ್ರದಲ್ಲಿರುವ ಸಂಪ್ರಸಿದ್ಧಿ ಕ್ರೀಡಾಂಗಣದಲ್ಲಿ ಮೊದಲ ಎರಡು ಪಂದ್ಯಗಳು ನಡೆಯಲಿದ್ದು ನಂತರ ಗೋವಾದಲ್ಲಿ ಹಣಾಹಣಿ ನಡೆಯಲಿದೆ.

ಭಾರತ, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಪಾಲ್ಗೊಳ್ಳುತ್ತಿದ್ದು ಭಾರತದಲ್ಲಿ ಇದೇ ಮೊದಲ ಬಾರಿ ಅಂಧರ ತ್ರಿಕೋನ ಕ್ರಿಕೆಟ್ ಸರಣಿ ನಡೆ ಯುತ್ತಿದೆ ಎಂದು ಸಮರ್ಥನಂ ಸಂಸ್ಥೆಯ ಸ್ಥಾಪಕ ಮಹಾಂತೇಶ್‌ ಜಿ.ಕೆ. ಗುರುವಾರ ತಿಳಿಸಿದರು. ಐದರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಸೆಣಸಲಿದ್ದು ಆರ ರಂದು ಆತಿಥೇಯರನ್ನು ಇಂಗ್ಲೆಂಡ್ ಎದುರಿಸಲಿದೆ. ಏಳರಂದು ವಿಶ್ರಾಂತಿ ದಿನವಾಗಿದ್ದು ಎಂಟರಂದು ಶ್ರೀಲಂಕಾ– ಇಂಗ್ಲೆಂಡ್‌, ಒಂಬತ್ತರಂದು ಭಾರತ–ಇಂಗ್ಲೆಂಡ್‌, 10ರಂದು ಭಾರತ–ಶ್ರೀಲಂಕಾ, 11ರಂದು ಶ್ರೀಲಂಕಾ–ಇಂಗ್ಲೆಂಡ್‌ ಪಂದ್ಯ ನಡೆಯ ಲಿದೆ. 12ರಂದು ಸೆಮಿಫೈನಲ್‌ ಮತ್ತು 13ರಂದು ಫೈನಲ್ ನಡೆಯಲಿದೆ. ಪಂದ್ಯಗಳು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿವೆ.