ಇಂಡೊನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ: ಸತ್ತವರ ಸಂಖ್ಯೆ 373ಕ್ಕೆ ಏರಿಕೆ

0
500

ಜ್ವಾಲಾಮುಖಿ ಸ್ಫೋಟದ ನಂತರ ಸುಂಡಾ ಜಲಸಂಧಿಯ ಬೀಚ್‌ಗಳಲ್ಲಿ ಶನಿವಾರ ರಾತ್ರಿ ಅಪ್ಪಳಿಸಿದ ಸುನಾಮಿಯಿಂದ ಸತ್ತವರ ಸಂಖ್ಯೆ 373ಕ್ಕೆ ಏರಿದೆ. 1,459ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 128 ಜನರು ಕಾಣೆಯಾಗಿದ್ದಾರೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಜಕಾರ್ತ, ಇಂಡೊನೇಷ್ಯಾ (ಎಎಫ್‌ಪಿ): ಜ್ವಾಲಾಮುಖಿ ಸ್ಫೋಟದ ನಂತರ ಸುಂಡಾ ಜಲಸಂಧಿಯ ಬೀಚ್‌ಗಳಲ್ಲಿ ಡಿಸೆಂಬರ್ 22 ರ ಶನಿವಾರ ರಾತ್ರಿ ಅಪ್ಪಳಿಸಿದ ಸುನಾಮಿಯಿಂದ ಸತ್ತವರ ಸಂಖ್ಯೆ 373ಕ್ಕೆ ಏರಿದೆ. 1,459ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 128 ಜನರು ಕಾಣೆಯಾಗಿದ್ದಾರೆ. ಕಾಣೆಯಾದವ
ರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸೋಮವಾರ ಸುರಿದ ಭಾರಿ ಮಳೆಯು ರಕ್ಷಣಾ ಕಾರ್ಯಚರಣೆಯನ್ನು ಅಡ್ಡಿಪಡಿಸಿತು. ಸುನಾಮಿ ಪೀಡಿತ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 

ಸಂಕಷ್ಟಕ್ಕೆ ಗುರಿಯಾದವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಹೇಳಿದೆ.