ಇಂಡಿಯಾ ಓಪನ್​​​ ಬಾಕ್ಸಿಂಗ್​​: ಚಿನ್ನದ ಪದಕಕ್ಕೆ ಕೊರಳೊಡ್ಡಿದ ವಿಶ್ವ ಚಾಂಪಿಯನ್​​

0
15

ಆರು ಬಾರಿ ವಿಶ್ವ ಚಾಂಪಿಯನ್​ ಭಾರತದ ಅಗ್ರ ಮಹಿಳಾ ಬಾಕ್ಸರ್​​ ಮೇರಿಕೋಮ್​​​ ಅವರು ಇಂಡಿಯಾ ಓಪನ್​ ಬಾಕ್ಸಿಂಗ್​​​ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ತಲೆ ಬಾಗಿದರು.

ಗುವಾಹಟಿ: ಆರು ಬಾರಿ ವಿಶ್ವ ಚಾಂಪಿಯನ್​ ಭಾರತದ ಅಗ್ರ ಮಹಿಳಾ ಬಾಕ್ಸರ್​​ ಮೇರಿಕೋಮ್​​​ ಅವರು ಇಂಡಿಯಾ ಓಪನ್​ ಬಾಕ್ಸಿಂಗ್​​​ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ತಲೆ ಬಾಗಿದರು.

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಫೈನಲ್​​​ ಸುತ್ತಿನ ಅಂತಿಮ ಹಣಾಹಣಿಯಲ್ಲಿ ಮೇರಿ ಕೋಮ್, ಮಿಜೋರಾಂ ವನ್ಲಾಲ್‌ ದುವಾಟಿ ಅವರನ್ನು ಮಣಿಸಿ ಸ್ವರ್ಣದ ಸಾಧನೆ ಮಾಡಿ ಭಾರತೀಯರ ಗಮನ ಸೆಳೆದರು.

ಏಷ್ಯನ್​​ ಕ್ರೀಡಾಕೂಟ ಚಾಂಪಿಯನ್​​ ಅಮಿತ್​ ಪಂಗಲ್​​ ಅವರು ಪುರುಷರ 52 ಕೆ.ಜಿ ವಿಭಾಗದ ಅಂತಿಮ ಸುತ್ತಿನ ಪಂದ್ಯದಲ್ಲಿ ಎದುರಾಳಿ ಸಚಿನ್​​​​​​ ಸ್ವಿಯಾಚ್​​ ಅವರನ್ನು 4-1 ಬೌಟ್​​ಗಳಿಂದ ಸೋಲಿಸಿ ಸ್ವರ್ಣ ತಮ್ಮದಾಗಿಸಿಕೊಂಡರು. ಇನ್ನೂ ವಿಶ್ವ ಚಾಂಪಿಯನ್ ಶಿಪ್​​​​​ ವಿಜೇತೆ ಎಲ್​​.ಸರಿತಾ ಅವರು ಸಿಮ್ರಾನ್​​ಜೀತ್ ಕೌರ್​​ ಎದುರು ಉತ್ತಮ ಹೋರಾಟ ನಡೆಸಿ ಗೆಲುವಿನ ನಗೆ ಬೀರಿದರು.

ಪುರುಷರ 60 ಕೆ.ಜಿ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶಿವ ಥಾಪ, ಎದುರಾಳಿ ಮನೀಷ್​​​ ಕೌಶಿಕ್​​​​ ಅವರನ್ನು ಮಣಿಸಿ ಸ್ವರ್ಣಕ್ಕೆ ಕೊರಳೊಡ್ಡಿದರು. ಐದು ದಿನಗಳಿಂದ ನಡೆದ ಟೂರ್ನಿಯಲ್ಲಿ ಭಾರತದ ಬಾಕ್ಸರ್​ಗಳು ಅದ್ಭುತ ಪ್ರದರ್ಶನದೊಂದಿಗೆ 18 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. (ಏಜನ್ಸೀಸ್​)