ಇಂಟರ್‌ಪೋಲ್‌ಗೆ ದಕ್ಷಿಣ ಕೊರಿಯಾದ ಜಾಂಗ್‌ ಅಧ್ಯಕ್ಷ

0
453

ದಕ್ಷಿಣ ಕೊರಿಯಾದ ಕಿಮ್‌ ಜಾಂಗ್‌ ಯಾಂಗ್‌ ಅವರು ಇಂಟರ್‌ಪೋಲ್‌ನ ನೂತನ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿದ್ದ ರಷ್ಯಾದ ಅಧಿಕಾರಿಗೆ ಪಶ್ಚಿಮದ ದೇಶಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ದುಬೈ (ಎಎಫ್‌ಪಿ): ದಕ್ಷಿಣ ಕೊರಿಯಾದ ಕಿಮ್‌ ಜಾಂಗ್‌ ಯಾಂಗ್‌ ಅವರು ಇಂಟರ್‌ಪೋಲ್‌ನ ನೂತನ ಅಧ್ಯಕ್ಷರಾಗಿ ನವೆಂಬರ್ 21 ರ ಬುಧವಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿದ್ದ ರಷ್ಯಾದ ಅಧಿಕಾರಿಗೆ ಪಶ್ಚಿಮದ ದೇಶಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಕಿಮ್‌ ಯಾಂಗ್‌ಗೆ ಅಮೆರಿಕದ ಬೆಂಬಲವಿತ್ತು. ದುಬೈನಲ್ಲಿ ನಡೆದ ಇಂಟರ್‌ಪೋಲ್‌ ಸದಸ್ಯ ದೇಶಗಳ ಪ್ರತಿನಿಧಿಗಳ ಸಭೆಯಲ್ಲಿ ಯಾಂಗ್‌ ಅವರನ್ನು ಆಯ್ಕೆ ಮಾಡಲಾಯಿತು. ಹಿಂದಿನ ಅಧ್ಯಕ್ಷ ಮೆಂಗ್‌ ಹಾಂಗ್‌ವಿ, ತಮ್ಮ ತವರಾದ ಚೀನಾದಲ್ಲಿ ಸೆಪ್ಟೆಂಬರ್‌ನಲ್ಲಿ ಕಣ್ಮರೆಯಾಗಿದ್ದರು. ಬಳಿಕ, ಲಂಚ ಪಡೆದ ಆರೋಪದ ಮೇಲೆ ಅವರನ್ನು ಬಂಧಿಸಿರುವುದಾಗಿ ಹೇಳಿದ್ದ ಚೀನಾ, ಇಂಟರ್‌ಪೋಲ್‌ಗೆ ಮೆಂಗ್‌ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿತ್ತು. ಆನಂತರ, ಇಂಟರ್‌ಪೋಲ್‌ನ ಹಿರಿಯ ಸದಸ್ಯ ಯಾಂಗ್‌ ಅವರನ್ನು ನಿಯೋಜಿತ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.