ಆಸ್ಪ್ರೇಲಿಯಾ ಸಂಸತ್ತಿಗೆ ಭಾರತೀಯ ಮೂಲದ “ದೇವ್‌ ಶರ್ಮಾ” ಆಯ್ಕೆ

0
11

ಇಸ್ರೇಲ್‌ನಲ್ಲಿ ಆಸ್ಪ್ರೇಲಿಯಾ ರಾಯಭಾರಿಯಾಗಿದ್ದ ಭಾರತೀಯ ಮೂಲದ ದೇವ್‌ ಶರ್ಮಾ (ದೇವಾನಂದ್‌ ನೊಯೆಲ್‌ ಶರ್ಮಾ)
ಆಸ್ಪ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿಡ್ನಿಯ ಅರೆನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಈ ಮೂಲಕ ಆಸ್ಪ್ರೇಲಿಯಾ ಸಂಸತ್ತಿಗೆ ಪ್ರವೇಶ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೆಲ್ಬೋರ್ನ್‌ : ಇಸ್ರೇಲ್‌ನಲ್ಲಿ ಆಸ್ಪ್ರೇಲಿಯಾ ರಾಯಭಾರಿಯಾಗಿದ್ದ ಭಾರತೀಯ ಮೂಲದ ದೇವ್‌ ಶರ್ಮಾ (ದೇವಾನಂದ್‌ ನೊಯೆಲ್‌ ಶರ್ಮಾ) ಆಸ್ಪ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ  ಸಿಡ್ನಿಯ ಅರೆನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಈ ಮೂಲಕ ಆಸ್ಪ್ರೇಲಿಯಾ ಸಂಸತ್ತಿಗೆ ಪ್ರವೇಶ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಿಬರಲ್‌ ಪಕ್ಷದಿಂದ ದೇವ್‌ ಚುನಾವಣೆಗೆ ಸ್ಪರ್ಧಿಸಿದ್ದರು. 

ಆರು ತಿಂಗಳ ಹಿಂದೆ ಇದೇ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ 43 ವರ್ಷದ ದೇವ್‌ ಶರ್ಮಾ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಶೇ. 51.16ರಷ್ಟು ಮತಗಳಿಸುವ ಮೂಲಕ ಜಯಶಾಲಿಯಾಗಿದ್ದಾರೆ. 

ರಾಷ್ಟ್ರೀಯ ಭದ್ರತೆ, ಮಹಿಳೆಯರಿಗೆ ಸರಕಾರಿ ಹಾಗೂ ಖಾಸಗಿ ನೌಕರಿಯಲ್ಲಿ ಪ್ರಾತಿನಿಧ್ಯ, ಮಾರುಕಟ್ಟೆ ಕ್ಷೇತ್ರದಲ್ಲಿ ಆಸ್ಪ್ರೇಲಿಯಾದ ಉನ್ನತ ಸ್ಥಾನ ರಕ್ಷಿಸುವ ಕುರಿತು ದೇವ್‌ ಚುನಾವಣಾ ಪ್ರಚಾರ ವೇಳೆ ಹಲವು ಸಭೆ ನಡೆಸಿದ್ದರು. 

ದೇವಾನಂದ ನೋಯೆಲ್ ಶರ್ಮಾ ಅವರು 21 ಡಿಸೆಂಬರ್ 1975 ರಂದು ವ್ಯಾಂಕೋವರ್, ಬ್ರಿಟಿಷ್ ಕೊಲಂಬಿಯಾ, ಕೆನಡಾದಲ್ಲಿ ಜನಿಸಿದ್ದಾರೆ

ಶರ್ಮಾ ಅವರು  ಇಸ್ರೇಲ್‌ನಲ್ಲಿ ಆಸ್ಪ್ರೇಲಿಯಾ ರಾಯಭಾರಿಯಾಗಿ  ಮೇ 16, 2013 ರಿಂದ ಜೂನ್ 19, 2017 ರವರೆಗೆ ಅಧಿಕಾರದಲ್ಲಿದ್ದರು

ಪ್ರಧಾನಿ ಸ್ಕಾಟ್‌ ಮಾರಿಸನ್‌ ನೇತೃತ್ವದ ಲಿಬರಲ್‌ ಪಕ್ಷ ಈ ಬಾರಿ ಚುನಾವಣೆಯಲ್ಲಿ ಬಹುಮತ ಗಳಿಸಿದೆ.