ಆಸ್ತಿ ಆದಾಯ ಮೀರಿದರೆ ಸಂಸದ ಶಾಸಕರು ಅನರ್ಹ: ಕೇಂದ್ರ ಸರ್ಕಾರ ಚಿಂತನೆ

0
256

ಸಂಸದರು ಹಾಗೂ ಶಾಸಕರ ಅಧಿಕಾರದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದು ಸಾಬೀತಾದರೆ ಅಂಥವರ ಸದಸ್ಯತ್ವವನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಚಿಂತನೆ ನಡೆಸಿದೆ.

ನವದೆಹಲಿ: ಸಂಸದರು ಹಾಗೂ ಶಾಸಕರ ಅಧಿಕಾರದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದು ಸಾಬೀತಾದರೆ ಅಂಥವರ ಸದಸ್ಯತ್ವವನ್ನು ಅನರ್ಹಗೊಳಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಚಿಂತನೆ ನಡೆಸಿದೆ. 

ಲೋಕಸಭೆ, ರಾಜ್ಯಸಭೆ, ಚುನಾವಣಾ ಆಯೋಗ ಹಾಗೂ 20 ರಾಜ್ಯಗಳ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ.

ಸಂಸದರು, ಶಾಸಕರು ಹಾಗೂ ಅವರ ಸಹವರ್ತಿಗಳ ಆಸ್ತಿಯ ಮೇಲೆ ನಿರಂತರವಾಗಿ ಕಣ್ಣಿಡಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ಕಾಯಂ ಸಾಂಸ್ಥಿಕ ವ್ಯವಸ್ಥೆ ರಚಿಸುವಂತೆ ಸುಪ್ರೀಂ ಕೋರ್ಟ್‌ ತೀರ್ಪಿನ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. 

ಸದಸ್ಯರು ತಮ್ಮ ಆಸ್ತಿ ಮತ್ತು ಹಣಕಾಸಿನ ಹೊಣೆಗಾರಿಕೆ ಬಗ್ಗೆ ಚುನಾವಣೆಯಾದ ತಕ್ಷಣವೇ  ಘೋಷಿಸಬೇಕು ಎಂದು ವಿವಿಧ ಶಾಸಕಾಂಗಗಳಲ್ಲಿ ನಿಯಮಗಳಿವೆ. ಆದರೆ, ಇದನ್ನು ಖಚಿತಪಡಿಸಿಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದು ಕಂಡುಬಂದರೆ ಅವರ ಸದಸ್ಯತ್ವ ಅನರ್ಹಗೊಳಿಸಲು ಸಂಸತ್ತು ಅಥವಾ ಯಾವುದೇ ವಿಧಾನಸಭೆಯಲ್ಲಿ ಶಾಸನ ರೂಪಿಸಲಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.