ಆಸ್ಟ್ರೇಲಿಯಾ ಪ್ರವಾಸೋದ್ಯಮ ರಾಯಭಾರಿಯಾಗಿ ಪರಿಣಿತಿ ಚೋಪ್ರಾ

0
11

ಭಾರತೀಯ ಪ್ರವಾಸಿಗರನ್ನು ಸೆಳೆಯಲು ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆಯು ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಅವರನ್ನು ತನ್ನ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದು, ಪರಿಣೀತಿ ಅವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಭಾರತೀಯ ಪ್ರವಾಸಿಗರನ್ನು ಸೆಳೆಯಲು ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆಯು ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಅವರನ್ನು ತನ್ನ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಪರಿಣೀತಿ ಅವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಆಸ್ಟ್ರೇಲಿಯಾದ ಪ್ರವಾಸೋದ್ಯಮಕ್ಕೆ ನೀಡಿದ ಉತ್ತೇಜನಕ್ಕಾಗಿ ಇಲ್ಲಿನ ಕಾನ್ಸುಲ್‌ ಜನರಲ್‌ ಟೋನಿ ಹ್ಯೂಬರ್‌ ಅವರು ಇತ್ತೀಚೆಗೆ ಪರಿಣೀತಿ ಅವರಿಗೆ ‘ಫ್ರೆಂಡ್‌ ಆಫ್‌ ಆಸ್ಟ್ರೇಲಿಯಾ‘ ಗೌರವವನ್ನು ನೀಡಿದ್ದರು. ಪ್ರವಾಸೋದ್ಯಮದ ಮೂಲಕ ಎರಡೂ ದೇಶಗಳ ಸಂಬಂಧ ಗಟ್ಟಿಗೊಳಿಸುವುದರ ಜೊತೆಗೆ, ದೀರ್ಘಕಾಲೀನ ಸ್ನೇಹ ಪರಂಪರೆ ಉಳಿಸಿಕೊಳ್ಳುವ ಉದ್ದೇಶದಿಂದ ‘ಫ್ರೆಂಡ್‌ ಆಫ್‌ ಆಸ್ಟ್ರೇಲಿಯಾ’ ಕಾರ್ಯಕ್ರಮವನ್ನು ಇಲಾಖೆ ಆರಂಭಿಸಿದೆ.

ಈ ಮೊದಲು, ಭಾರತದ ಪ್ರಸಿದ್ಧ ಬಾಣಸಿಗ ಸಂಜೀವ್‌ ಕಪೂರ್‌ ಹಾಗೂ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರು ಆಸ್ಟ್ರೇಲಿಯಾದ ಭಾರತೀಯ ಪ್ರವಾಸೋದ್ಯಮ ರಾಯಭಾರಿಗಳಾಗಿದ್ದರು.