ಆಸ್ಟ್ರೇಲಿಯಾದ ಬ್ಯಾಟ್ ತಯಾರಕ ಕಂಪನಿ ವಿರುದ್ಧ ಸಚಿನ್ ದೂರು

0
22

ಆಸ್ಟ್ರೇಲಿಯಾದ ಬ್ಯಾಟ್‌ ತಯಾರಿಕಾ ಕಂಪನಿಯು ಒಪ್ಪಂದಕ್ಕೆ ಸಂಬಂಧಿಸಿದ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಮೆಲ್ಬರ್ನ್ (ಪಿಟಿಐ): ಒಪ್ಪಂದಕ್ಕೆ ಸಂಬಂಧಿಸಿದ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದ ಬ್ಯಾಟ್‌ ತಯಾರಿಕಾ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದಾರೆ. 

ಕಂಪನಿ ತಯಾರಿಸುವ ಬ್ಯಾಟ್‌ಗಳ ಮೇಲೆ ತಮ್ಮ ಹೆಸರು ಮತ್ತು ಚಿತ್ರ ಹಾಕಿದ್ದಕ್ಕಾಗಿ ನೀಡಬೇಕಾದ 21 ಕೋಟಿ ಮೊತ್ತವನ್ನು ತಮಗೆ ಪಾವತಿಸಿಲ್ಲ ಎಂದು ಸಚಿನ್ ದೂರಿದ್ದಾರೆ. ಸಿಡ್ನಿ ಮೂಲದ ಸ್ಪಾರ್ಟನ್‌ ಸ್ಪೋರ್ಟ್ಸ್ ಕಂಪನಿ 2016ರಲ್ಲಿ ಒಪ್ಪಂದವನ್ನು ಮಾಡಿಕೊಂಡಿತ್ತು ಎಂದು ವರದಿಯಾಗಿದೆ. ಭಾರತೀಯ ಉದ್ಯಮಿ ಕುನಾಲ್‌ ಶರ್ಮ ಈ ಕಂಪನಿಯ ಸಹ ಸ್ಥಾಪಕರಾಗಿದ್ದರು.

ಕಂಪನಿಯಲ್ಲಿ ಹೂಡಿಕೆ ಮಾಡಿದ್ದರ ಜೊತೆಗೆ ಸಲಹಾ ಸಮಿತಿ ಸದಸ್ಯರಾಗಿದ್ದ ತೆಂಡೂಲ್ಕರ್‌, ತಮಗೆ ಕೋಟಿಗಟ್ಟಲೆ ಹಣ ಬಾಕಿಯಿರಿಸಿದ ಕಾರಣಕ್ಕೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಂಪನಿಯನ್ನು ತೊರೆದಿದ್ದರು. ಅವರು ಎಷ್ಟು ಪರಿಹಾರ ಕೇಳಿದ್ದಾರೆ ಎಂಬುದು ಗೊತ್ತಾಗಿಲ್ಲ.