ಆಸ್ಕರ್ ಸ್ಪರ್ಧೆಗೆ ‘ಗಲ್ಲಿಬಾಯ್‌’ ಆಯ್ಕೆ

0
15

ಈ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಜೋಯಾ ಆಖ್ತರ್‌ ಅವರ ‘ಗಲ್ಲಿ ಬಾಯ್‌’ ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು ಎಂದು ಭಾರತೀಯ ಚಲನಚಿತ್ರ ಒಕ್ಕೂಟ ಸೆಪ್ಟೆಂಬರ್ 22 ರ ಶನಿವಾರ ತಿಳಿಸಿದೆ.

ನವದೆಹಲಿ (ಪಿಟಿಐ): ಈ ವರ್ಷದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಜೋಯಾ ಆಖ್ತರ್‌ ಅವರ ‘ಗಲ್ಲಿ ಬಾಯ್‌’ ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು ಎಂದು ಭಾರತೀಯ ಚಲನಚಿತ್ರ ಒಕ್ಕೂಟ  ಸೆಪ್ಟೆಂಬರ್ 22 ರ ಶನಿವಾರ ತಿಳಿಸಿದೆ.

ಜೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ  ರ‍್ಯಾಪ್  ಗಾಯಕನಾಗಬೇಕೆಂಬ ಕನಸು ಹೊಂದಿರುವ ಸ್ಲಂ ಯುವಕನಾಗಿ ರಣಬೀರ್ ನಟಿಸಿದ್ದರೆ, ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ವಿಜಯ್‌ ರಾಜ್‌, ಸಿದ್ದಾಂತ್ ಚತುರ್ವೇದಿ, ವಿಜಯ್‌ ವರ್ಮಾ ಇತರರು ನಟಿಸಿದ್ದಾರೆ. ಈ ಚಿತ್ರ ಫೆಬ್ರುವರಿಯಲ್ಲಿ ದೇಶದಾದ್ಯಂತ ತೆರೆಕಂಡಿದೆ. 

ಆಸ್ಕರ್​ನ ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ ವಿಭಾಗದಲ್ಲಿ ‘ಗಲ್ಲಿ ಬಾಯ್’ ಸ್ಪರ್ಧಿಸಲಿದೆ. ಭಾರತದಿಂದ ನಾಮನಿರ್ದೇಶನಗೊಳ್ಳಲು 28 ಸಿನಿಮಾಗಳು ಪೈಪೋಟಿ ನಡೆಸಿದ್ದವು. ಅದರಲ್ಲಿ ಕನ್ನಡದ ‘ಕುರುಕ್ಷೇತ್ರ’, ಬಾಲಿವುಡ್​ನ ‘ಬಧಾಯಿ ಹೋ’, ‘ಅಂಧಾಧುನ್’, ‘ಆರ್ಟಿಕಲ್ 15’, ‘ಕೇಸರಿ’, ‘ಉರಿ’ ತಮಿಳಿನ ‘ಸೂಪರ್ ಡಿಲಕ್ಸ್’, ರಶ್ಮಿಕಾ-ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೇಡ್’ ಮುಂತಾದ ಚಿತ್ರಗಳು ರೇಸ್​ನಲ್ಲಿದ್ದವು. ಅಂತಿಮವಾಗಿ ಆಸ್ಕರ್​ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಅವಿರೋಧವಾಗಿ ‘ಗಲ್ಲಿ ಬಾಯ್’ ಚಿತ್ರವನ್ನು ಆಯ್ಕೆ ಮಾಡಲಾಯಿತು’ ಎಂದು ಎಫ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಸುಪರ್ಣ ಸೇನ್‌ ಅವರು ತಿಳಿಸಿದ್ದಾರೆ.

ಮುಂಬೈ ಸ್ಲಂಗಳಿಂದ ಬಂದ ಕೆಲವು ಗಾಯಕರ ನೈಜ ಜೀವನದ ಘಟನೆಗಳನ್ನೇ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ವರ್ಷ ತೆರೆಕಂಡ ‘ಗಲ್ಲಿ ಬಾಯ್’ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದು ಮಾತ್ರವಲ್ಲದೆ, ಭಾರತೀಯ ಮಾರುಕಟ್ಟೆಯಲ್ಲಿ 140 ಕೋಟಿ ರೂ. ಕಮಾಯಿ ಮಾಡಿತು. ಈವರೆಗೂ ಭಾರತದ ಯಾವ ಚಿತ್ರವೂ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿಲ್ಲ. ಈ ಬಾರಿ ‘ಗಲ್ಲಿ ಬಾಯ್’ ಯಾವ ರೀತಿ ಮೋಡಿ ಮಾಡಲಿದೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮೂಡಿದೆ.

2020ರ ಫೆಬ್ರವರಿ 9ರಂದು ಅಂತಿಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಚಿತ್ರಗಳ ಆಯ್ಕೆಯಲ್ಲಿ ನಿರ್ಮಾಪಕಿ ಅಪರ್ಣಾ ಸೇನ್‌ ತೀರ್ಪುಗಾರರ ಮುಖ್ಯಸ್ಥರಾಗಿದ್ದರು.