ಆಲ್ ಇಂಗ್ಲೆಂಡ್ ಓಪನ್ 2018: ಪಿವಿ ಸಿಂಧುಗೆ ಸೋಲು

0
71

ಆಲ್ ಇಂಗ್ಲೆಂಡ್ ಓಪನ್ 2018 ಟೂರ್ನಿಯ ಸೆಮಿಫೈನಲ್‌ ಪಂದ್ಯಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಜಪಾನ್ ನ ಅಕನೆ ಯಮಗುಚಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ಇಂದು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ವಿರುದ್ಧ ಜಪಾನ್‌ ನ ಯಮಗುಚಿ 19-21, 21-19, 21-18ರ ಅಂತರದಲ್ಲಿ ಗೆಲುವು ದಾಖಲಿಸಿದರು. ಈ ಮೂಲಕ ಯಮಗುಚಿ ಫೈನಲ್ ಪ್ರವೇಶಿಸಿದ್ದಾರೆ.
 
ಯಮಗುಚಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಚೀನಾದ ತೈ ಝು ಯಿಂಗ್ ಅವರನ್ನು ಎದುರಿಸಲಿದ್ದಾರೆ.
 
ಸಿಂಧು ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ 2016ನೇ ಸಾಲಿನ ಚಾಂಪಿಯನ್‌, ಜಪಾನ್‌ ನ ನೊಜೊಮಿ ಒಕುಹರಾ ಅವರ ವಿರುದ್ಧ 20–22, 21–18, 21–18ರಿಂದ ಮಣಿಸಿ, ಸೆಮಿ ಫೈನಲ್ ಪ್ರವೇಶಿಸಿದ್ದರು.