“ಆರ್. ವೈಶಾಲಿ” ಚೆಸ್ ಗ್ರಾಂಡ್ ಮಾಸ್ಟರ್

0
773

ತಮಿಳುನಾಡಿನ ಆರ್. ವೈಶಾಲಿ ಭಾರತದ 12ನೇ ಮಹಿಳಾ ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ. 17 ವರ್ಷದ ವೈಶಾಲಿ ಲಾಟ್ವಿಯಾದಲ್ಲಿ ಆಗಸ್ಟ್ 19 ರ ಭಾನುವಾರ ಮುಕ್ತಾಯಗೊಂಡ 8ನೇ ರಿಗಾ ಟೆಕ್ನಿಕಲ್ ವಿವಿಯ ಮುಕ್ತ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಚೆನ್ನೈ: ತಮಿಳುನಾಡಿನ ಆರ್. ವೈಶಾಲಿ ಭಾರತದ 12ನೇ ಮಹಿಳಾ ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ. 17 ವರ್ಷದ ವೈಶಾಲಿ ಲಾಟ್ವಿಯಾದಲ್ಲಿ ಆಗಸ್ಟ್ 19 ರ ಭಾನುವಾರ ಮುಕ್ತಾಯಗೊಂಡ 8ನೇ ರಿಗಾ ಟೆಕ್ನಿಕಲ್ ವಿವಿಯ ಮುಕ್ತ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ವೈಶಾಲಿ ಕಳೆದ ಜೂನ್​ನಲ್ಲಿ ವಿಶ್ವದ 2ನೇ ಕಿರಿಯ ಗ್ರಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಪಡೆದಿದ್ದ ಆರ್. ಪ್ರಜ್ಞಾನಂದ ಅವರ ಹಿರಿಯ ಸಹೋದರಿಯಾಗಿದ್ದಾರೆ.

ವೈಶಾಲಿ ಇದೇ ತಿಂಗಳು ಇರಾನ್​ನಲ್ಲಿ ನಡೆದ ಏಷ್ಯನ್ ನೇಷನ್ಸ್ ಕಪ್ ಬ್ಲಿಟ್ಜ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಬ್ಲಿಟ್ಜ್ ಚಾಂಪಿಯನ್​ಷಿಪ್​ನಲ್ಲಿಯೂ ವೈಶಾಲಿ ಗಮನ ಸೆಳೆದಿದ್ದರು. ವೈಶಾಲಿ ಕೂಡ ಪ್ರಜ್ಞಾನಂದನಂತೆ ಪ್ರತಿಭಾವಂತೆ ಮತ್ತು ಕಠಿಣ ಪರಿಶ್ರಮಿ. ಕಳೆದ ಒಂದು ವರ್ಷದಿಂದ ಈಕೆ ಉತ್ತಮ ರೀತಿಯ ಪ್ರಯತ್ನ ಪಡುತ್ತಿದ್ದಾಳೆ. ಈ ಗೆಲುವು ಆಕೆಯ ಆತ್ಮವಿಶ್ವಾಸವನ್ನು ಖಂಡಿತಾ ಹೆಚ್ಚು ಮಾಡಿದ್ದು, ಇದು ಮುಂದಿನ ಗುರಿ ಈಡೇರಿಸಲು ನೆರವಾಗಲಿದೆ ಎಂದು ಕೋಚ್ ಆರ್​ಬಿ ರಮೇಶ್ ಹೇಳಿದ್ದಾರೆ.

12 ವರ್ಷದ ಪ್ರಜ್ಞಾನಂದ ಕಳೆದ ಜೂನ್​ನಲ್ಲಿ ರಷ್ಯಾದ ದಿಗ್ಗಜ ಸೆರ್ಗಿ ಕರ್ಜಾಕಿನ್ ಬಳಿಕ ವಿಶ್ವದ ಅತಿ ಕಿರಿಯ ಗ್ರಾಂಡ್ ಮಾಸ್ಟರ್ ಆಗಿದ್ದರು. ಅವರ ಈ ಸಾಧನೆಯ ಬಳಿಕ 50 ದಿನಗಳಲ್ಲೇ ಅವರ ಸಹೋದರಿ ಕೂಡ ಗ್ರಾಂಡ್ ಮಾಸ್ಟರ್ ಆಗಿರುವುದು ವಿಶೇಷವೆನಿಸಿದೆ.