ಆರ್‌ಬಿಐ ಮೊದಲ ‘ಸಿಎಫ್‌ಒ’ ಸುಧಾ

0
14

ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಕೈಗೊಂಡಿರುವ ಸಾಂಸ್ಥಿಕ ಬದಲಾವಣೆಗಳ ಅಂಗವಾಗಿ ಈ ನೇಮಕ ಮಾಡಲಾಗಿದೆ. ಕೇಂದ್ರೀಯ ಬ್ಯಾಂಕ್‌ನಲ್ಲಿ ಹೊಸದಾಗಿ ಈ ಹುದ್ದೆ ಸೃಷ್ಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ: ನ್ಯಾಷನಲ್‌ ಸೆಕ್ಯುರೀಟಿಸ್‌ ಡಿಪಾಸಿಟರಿ ಲಿಮಿಟೆಡ್‌ನ (ಎನ್‌ಎಸ್‌ಡಿಎಲ್‌) ಉಪಾಧ್ಯಕ್ಷೆ ಸುಧಾ ಬಾಲಕೃಷ್ಣನ್‌ ಅವರನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮೊದಲ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ನೇಮಕ ಮಾಡಲಾಗಿದೆ.

ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಕೈಗೊಂಡಿರುವ ಸಾಂಸ್ಥಿಕ ಬದಲಾವಣೆಗಳ ಅಂಗವಾಗಿ ಈ ನೇಮಕ ಮಾಡಲಾಗಿದೆ. ಕೇಂದ್ರೀಯ ಬ್ಯಾಂಕ್‌ನಲ್ಲಿ ಹೊಸದಾಗಿ ಈ ಹುದ್ದೆ ಸೃಷ್ಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಾರ್ಟರ್ಡ್‌ ಅಕೌಂಟಂಟ್‌ ಆಗಿರುವ ಸುಧಾ ಅವರು ನಿರ್ವಹಿಸಲಿರುವ ಹೊಸ ಹುದ್ದೆಯು ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಸರಿಸಮಾನವಾಗಿರಲಿದೆ.

ಹಣಕಾಸಿಗೆ ಸಂಬಂಧಿಸಿದ ಕಾರ್ಯನಿರ್ವಹಣೆಗೆ ಇದುವರೆಗೆ ಆರ್‌ಬಿಐನಲ್ಲಿ ಪ್ರತ್ಯೇಕ ಉನ್ನತ ಅಧಿಕಾರಿ ಇದ್ದಿರಲಿಲ್ಲ ಉರ್ಜಿತ್‌ ಪಟೇಲ್‌ ಅವರ ಮುಂಚೆ ಈ ಹುದ್ದೆಯಲ್ಲಿದ್ದ ರಘುರಾಂ ರಾಜನ್‌ ಅವರು ‘ಸಿಎಫ್‌ಒ’ ಹುದ್ದೆ ಸೃಷ್ಟಿಸಲು ಒಲವು ತೋರಿದ್ದರು. ಇದಕ್ಕಾಗಿ ಆರ್‌ಬಿಐ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎನ್ನುವ ಕಾರಣ ನೀಡಿ ಸರ್ಕಾರ ಈ ಸಲಹೆಯನ್ನು ತಳ್ಳಿ ಹಾಕಿತ್ತು.