ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ಗೆ ಸಿಐಸಿ ನೋಟಿಸ್‌

0
765

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಗೊಳಿಸದ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಉರ್ಜಿತ್‌ ಪಟೇಲ್‌ಗೆ ಕೇಂದ್ರೀಯ ಮಾಹಿತಿ ಆಯೋಗವು(ಸಿಐಸಿ) ಶೋಕಾಸ್‌ ನೋಟಿಸ್‌ ನೀಡಿದೆ.

ಹೊಸದಿಲ್ಲಿ:  ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಗೊಳಿಸದ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಉರ್ಜಿತ್‌ ಪಟೇಲ್‌ಗೆ ಕೇಂದ್ರೀಯ ಮಾಹಿತಿ ಆಯೋಗವು(ಸಿಐಸಿ) ಶೋಕಾಸ್‌ ನೋಟಿಸ್‌ ನೀಡಿದೆ. 
ಈ ಬೃಹತ್‌ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸದೆ ಉರ್ಜಿತ್‌ ಅವರು ಸುಪ್ರೀಂ ಕೋರ್ಟ್‌ಗೆ ‘ಅಗೌರವ’ ತೋರಿದ್ದಾರೆ ಎಂದು ಸಿಐಸಿ ಹೇಳಿದೆ. ಇದೇ ವೇಳೆ, ವಸೂಲಾಗದ ಸಾಲಗಳ(ಎನ್‌ಪಿಎ) ಕುರಿತಾಗಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಅವರ ಪತ್ರವನ್ನು ಬಹಿರಂಗಗೊಳಿಸುವಂತೆ ಪ್ರಧಾನಿ ಕಾರ್ಯಾಲಯ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐಗೆ ಸಿಐಸಿ ಹೇಳಿದೆ. 

50 ಕೋಟಿ ರೂ. ಮತ್ತು ಅದಕ್ಕೂ ಹೆಚ್ಚಿನ ಸಾಲವನ್ನು ಬಾಕಿ ಉಳಿಸಿಕೊಂಡಿದ್ದ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯನ್ನು ಆರ್‌ಬಿಐ ಸಿದ್ಧಪಡಿಸಿತ್ತು. ಅದನ್ನು ಬಹಿರಂಗಪಡಿಸಲು ಆರ್‌ಬಿಐ ನಿರಾಕರಿಸಿತ್ತು. ಇದು ಸಿಐಸಿ ಅಸಮಾಧಾನಕ್ಕೆ ಕಾರಣವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಬೇಕು ಅನ್ನುವುದು ಸಿಐಸಿ ಉದ್ದೇಶ. ಸಣ್ಣ ಸಾಲಗಳನ್ನು ಕಟ್ಟದ ರೈತರ ಮರ್ಯಾದೆಯನ್ನು ಬ್ಯಾಂಕ್‌ಗಳು ಹರಾಜಾಗುತ್ತವೆ. ಆದರೆ, ದೊಡ್ಡ ಸಾಲಗಾರರ ಹೆಸರನ್ನು ಬಹಿರಂಗಪಡಿಸಲು ಹಿಂಜರಿಕೆ ಏಕೆ? ಎಂದು ಈ ಹಿಂದೆ ಸಿಐಸಿ ಪ್ರಶ್ನಿಸಿತ್ತು. 

ಸುಪ್ರೀಂ ಕೋರ್ಟ್‌ ಆದೇಶವನ್ನೂ ಗೌರವಿಸದೇ, ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗೊಳಿಸದ ನಿಮಗೆ(ಉರ್ಜಿತ್‌ ಪಟೇಲ್‌) ಏಕೆ ಗರಿಷ್ಠ ದಂಡ ವಿಧಿಸಬಾರದು ಎಂಬುದನ್ನು ವಿವರಿಸಿ. 
                                                                     – ಕೇಂದ್ರ ಮಾಹಿತಿ ಆಯೋಗ