“ಆರ್‌ಬಿಐ”ಗೆ ಯು.ಕೆ.ಸಿನ್ಹಾ ನೇತೃತ್ವದ “ಎಂಎಸ್‌ಎಂಇ” ಸಮಿತಿ ವರದಿ ಸಲ್ಲಿಕೆ

0
21

ತಜ್ಞರ ಸಮಿತಿಯು ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ಸ್ಥಿತಿಗತಿಗಳ ಪರಿಶೀಲನಾ ವರದಿಯನ್ನು ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರಿಗೆ ಸಲ್ಲಿಸಿದೆ ಎಂದು ಆರ್‌ಬಿಐ ತಿಳಿಸಿದೆ.

ಮುಂಬೈ (ಪಿಟಿಐ): ತಜ್ಞರ ಸಮಿತಿಯು ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ಸ್ಥಿತಿಗತಿಗಳ ಪರಿಶೀಲನಾ ವರದಿಯನ್ನು ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರಿಗೆ ಸಲ್ಲಿಸಿದೆ ಎಂದು ಆರ್‌ಬಿಐ ತಿಳಿಸಿದೆ.

ಎಂಎಸ್‌ಎಂ ವಲಯದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಆರ್‌ಬಿಐ, ಜನವರಿಯಲ್ಲಿ 8 ಸದಸ್ಯರ  ಸಮಿತಿಯನ್ನು ರಚನೆ ಮಾಡಿತ್ತು.

ಯಾರ ನೇತೃತ್ವದ ಸಮಿತಿ : ವಿವಿಧ ಷೇರುದಾರರ ಸಲಹೆಗಳನ್ನು ಪಡೆದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷ ಯು.ಕೆ.ಸಿನ್ಹಾ ನೇತೃತ್ವದ ಸಮಿತಿಯು ತನ್ನ ವರದಿ ಸಲ್ಲಿಸಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಎಂಎಸ್‌ಎಂಇ ಸಮಿತಿಯ ಸದಸ್ಯರುಗಳು :   ಎಂಎಸ್‌ಎಂಇ ಅಭಿವೃದ್ಧಿ ಆಯುಕ್ತ ರಾಮ್ ಮೋಹನ್ ಮಿಶ್ರಾ,  ಹಣಕಾಸು ಸೇವೆಗಳ ವಿಭಾಗದ ಜಂಟಿ ಕಾರ್ಯದರ್ಶಿ ಪಂಕಜ್ ಜೈನ್, ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ,  ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಅನುಪ್ ಬಾಗ್ಚಿ, ಐಐಎಂ-ಅಹಮದಾಬಾದ್ ಪ್ರಾಧ್ಯಾಪಕ ಅಭಿಮಾನ್ ದಾಸ್,  ಇಸ್ಪಿರಿಟ್ ಫೌಂಡೇಶನ್ ಸಂಸ್ಥಾಪಕ ಶರದ್ ಶರ್ಮಾ ಮತ್ತು ದ್ವಾರಾ ಟ್ರಸ್ಟ್ ಅಧ್ಯಕ್ಷ ಬಿಂದು ಅನಂತ್ ಮುಂತಾದವರು ಸದಸ್ಯರಾಗಿದ್ದಾರೆ

ವಲಯದ ಆರ್ಥಿಕ ಮತ್ತು ಹಣಕಾಸು ಸ್ಥಿರತೆಗೆ ದೀರ್ಘಾವಧಿಯ ಪರಿಹಾರ ಕ್ರಮಗಳು, ಇತ್ತೀಚಿನ ಆರ್ಥಿಕ ಸುಧಾರಣೆಗಳಿಂದ ವಲಯದ ಮೇಲೆ ಆಗಿರುವ ಪರಿಣಾಮಗಳು ಮತ್ತು ಪ್ರಗತಿಗೆ ಅಡ್ಡಿಯಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದೆ.