ಆರ್ಥಿಕ ಬಿಕ್ಕಟ್ಟಿನಿಂದಾಗಿ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಜೆಟ್‌ ಏರ್‌ವೇಸ್‌ ಸೇವೆ ಸ್ಥಗಿತ

0
511

ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯ ಆರ್ಥಿಕ ಸಂಕಷ್ಟ ಬಿಗಡಾಯಿಸಿದ್ದು, ಏಪ್ರಿಲ್‌ ಕೊನೆವರೆಗೂ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಮತ್ತು ದೆಹಲಿ ಮತ್ತು ಮುಂಬೈ ಸೇರಿದಂತೆ ಏಳು ಇತರೆ ಸಾಗರೋತ್ತರ ಮಾರ್ಗಗಳ ಓಡಾಟವನ್ನು ಕಡಿಮೆಗೊಳಿಸಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.

ನವದೆಹಲಿ: ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯ ಆರ್ಥಿಕ ಸಂಕಷ್ಟ ಬಿಗಡಾಯಿಸಿದ್ದು, ಏಪ್ರಿಲ್‌ ಕೊನೆವರೆಗೂ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಮತ್ತು ದೆಹಲಿ ಮತ್ತು ಮುಂಬೈ ಸೇರಿದಂತೆ ಏಳು ಇತರೆ ಸಾಗರೋತ್ತರ ಮಾರ್ಗಗಳ ಓಡಾಟವನ್ನು ಕಡಿಮೆಗೊಳಿಸಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಕಳೆದ ಡಿಸೆಂಬರ್‌ನಲ್ಲಷ್ಟೇ ಸೇವೆಯನ್ನು ಆರಂಭಿಸಿದ್ದ ಪುಣೆ-ಸಿಂಗಪುರ(ವಾರದ ಏಳು) ಮತ್ತು ಪುಣೆ-ಅಬುಧಾಬಿ(ವಾರಕ್ಕೆ ಏಳು ವಿಮಾನಗಳು)ಗಳಲ್ಲಿ ಜೆಟ್ ಏರ್ ವೇಸ್ ವಿಮಾನಗಳ ಸೇವೆಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಮುಂಬೈ-ಮ್ಯಾಂಚೆಸ್ಟರ್ ನಡುವೆ ಈಗಾಗಲೇ ಜೆಟ್ ಏರ್ ವೇಸ್ ವಿಮಾನಗಳ ಹಾರಾಟ ಬಂದ್ ಮಾಡಲಾಗಿದೆ.

ನರೇಶ್‌ ಗೋಯಲ್‌ ಹಿಡಿತದಲ್ಲಿರುವ ಜೆಟ್‌ ಏರ್‌ವೇಸ್‌ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ವಿಮಾನಗಳ ಬಾಡಿಗೆ ಭರಿಸಲಾಗದೇ ತನ್ನ ಕಾರ್ಯಾಚರಣೆಯನ್ನು ಈಗ ಸುಮಾರು 600 ಕ್ಕೂ ಹೆಚ್ಚು ದೈನಂದಿನ ವಿಮಾನ ಹಾರಾಟದಿಂದ ನಾಲ್ಕನೇ ಒಂದು ಭಾಗಕ್ಕೆ ಕಡಿಮೆ ಮಾಡಿದೆ.

ಏ. 30 ರವರೆಗೆ ದೆಹಲಿಯಿಂದ ಅಬುಧಾಬಿಗೆ(ವಾರಕ್ಕೆ ಒಂಬತ್ತು), ದಾಮನ್‌(ವಾರದ 14), ಢಾಕಾ(11), ಹಾಂಗ್‌ಕಾಂಗ್‌ ಮತ್ತು ರಿಯಾದ್ (ವಾರಕ್ಕೆ ಏಳು) ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ದಿನಕ್ಕೆರಡು ಬಾರಿ ಹಾರಾಟ ಮಾಡುತ್ತಿದ್ದ ಬೆಂಗಳೂರು – ಸಿಂಗಾಪುರ ಮಾರ್ಗದ ಸೇವೆಯನ್ನು ಕೂಡ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)