ಆರ್ಕ್ಟಿಕ್‌ನಲ್ಲೂ ‘ಸೂಪರ್‌ ಬಗ್‌’ ಮಾರಣಾಂತಿಕ ಬ್ಯಾಕ್ಟೀರಿಯಾ (ದೆಹಲಿಯಲ್ಲಿ ಪತ್ತೆಯಾಗಿದ್ದ ಬ್ಯಾಕ್ಟೀರಿಯಾ)

0
619

ನವದೆಹಲಿಯಲ್ಲಿ ಹತ್ತು ವರ್ಷಗಳ ಹಿಂದೆ ಪತ್ತೆಯಾಗಿ ಆತಂಕ ಸೃಷ್ಟಿಸಿದ ಮಾರಣಾಂತಿಕ ಬ್ಯಾಕ್ಟೀರಿಯಾ ‘ಸೂಪರ್‌ ಬಗ್‌’ ಉತ್ತರ ಧ್ರುವ ಪ್ರದೇಶವಾದ ಆರ್ಕ್ಟಿಕ್‌ಗೂ ಹಬ್ಬಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಂಡನ್‌ (ಪಿಟಿಐ): ನವದೆಹಲಿಯಲ್ಲಿ ಹತ್ತು ವರ್ಷಗಳ ಹಿಂದೆ ಪತ್ತೆಯಾಗಿ ಆತಂಕ ಸೃಷ್ಟಿಸಿದ ಮಾರಣಾಂತಿಕ ಬ್ಯಾಕ್ಟೀರಿಯಾ ‘ಸೂಪರ್‌ ಬಗ್‌’ ಉತ್ತರ ಧ್ರುವ ಪ್ರದೇಶವಾದ ಆರ್ಕ್ಟಿಕ್‌ಗೂ ಹಬ್ಬಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಹತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕುಡಿಯುವ ನೀರಿನಲ್ಲಿ ಈ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದವು. ಅಲ್ಲಿಂದ ಇಲ್ಲಿಯವರೆಗೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಇವು ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಆರ್ಕ್ಟಿಕ್‌ ಪ್ರದೇಶದಲ್ಲಿಯೂ ಕಂಡು ಬಂದಿವೆ. 

‘ಪ್ರಾಣಿಗಳ ಮತ್ತು ಮನುಷ್ಯರ ಕರುಳಿನ ಭಾಗದಲ್ಲಿ ಇದು ಕಂಡು ಬಂದಿದೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಮನುಷ್ಯರು, ಪಕ್ಷಿಗಳು ಮತ್ತು ವನ್ಯಜೀವಿಗಳ ಮೂಲಕ ‘ಸೂಪರ್‌ ಬಗ್‌’ ಹರಡಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

‘ಆರ್ಕ್ಟಿಕ್‌ ಭೂಮಿಯ ಮೇಲಿನ ಅತಿ ಪ್ರಾಚೀನವಾದ ಪರಿಸರ ವ್ಯವಸ್ಥೆ ಹೊಂದಿರುವ ಪ್ರದೇಶ. ಇಲ್ಲಿಯೂ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂದರೆ, ಭೂಮಿಯ ಮೇಲೆ ಮಾಲಿನ್ಯ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ ಎಂಬುದು ತಿಳಿಯುತ್ತದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಯಾವುದೇ ಔಷಧಿಯಿಂದಲೂ, ಎಂದಿಗೂ ವಾಸಿಯಾಗದ ಕಾಯಿಲೆಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳು ಈ ‘ಸೂಪರ್‌ ಬಗ್‌’.