ಆರನೇ ಆವೃತ್ತಿಯ ವಿವೊ ಪ್ರೊ ಕಬಡ್ಡಿ ಲೀಗ್‌ : ಬೆಂಗಳೂರು ಬುಲ್ಸ್‌ ಚಾಂಪಿಯನ್

0
1029

ಆರನೇ ಆವೃತ್ತಿಯ ವಿವೊ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ಅನ್ನು ಮಣಿಸಿದೆ.2019 ಜನೇವರಿ 5 ರ ಶನಿವಾರ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದ ಬೆಂಗಳೂರು, ಗುಜರಾತ್‌ ವಿರುದ್ಧ 5 ಪಾಯಿಂಟ್‌ಗಳ ರೋಚಕ ಜಯಗಳಿಸಿದೆ.

ಬೆಂಗಳೂರು:ಆರನೇ ಆವೃತ್ತಿಯ ವಿವೊ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ಅನ್ನು ಮಣಿಸಿದೆ. 2019 ಜನೇವರಿ 5 ರ ಶನಿವಾರ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದ ಬೆಂಗಳೂರು, ಗುಜರಾತ್‌ ವಿರುದ್ಧ 5 ಪಾಯಿಂಟ್‌ಗಳ ರೋಚಕ ಜಯಗಳಿಸಿದೆ. 

ಶನಿವಾರದ ಅಂತಿಮ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-33 ಅಂಕಗಳ ಅಂತರದಲ್ಲಿ ಗುಜರಾತ್ ವಿರುದ್ಧ ಜಯಗಳಿಸಿದೆ. ಬೆಂಗಳೂರು ಬುಲ್ಸ್ ತಂಡದ ಪವನ್ ಕುಮಾರ್ ಸೆಹ್ರಾವತ್ 22 ಅಂಕ ಗಳಿಸಿ, ಬೆಂಗಳೂರಿನ ಜಯವನ್ನು ಖಚಿತಪಡಿಸಿದರು. ಬೆಂಗಳೂರು ಜಯಗಳಿಸುತ್ತಿದ್ದಂತೆ ಬೆಂಗಳೂರು ಬುಲ್ಸ್‌ನ ಕೋಚ್ ಬಿ ಸಿ ರಮೇಶ್ ಮೊದಲ ಗೆಲುವನ್ನು ತಂಡದೊಂದಿಗೆ ಸಂಭ್ರಮಿಸಿದರು. 

2018-19ರ ವಿವೊ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅದ್ಭುತ ನಿರ್ವಹಣೆ ನೀಡಿದ್ದ ಬೆಂಗಳೂರು ತಂಡವು ಲೀಗ್ ಹಂತದಲ್ಲಿ ಆಡಿದ್ದ 22 ಪಂದ್ಯಗಳ ಪೈಕಿ 13ರಲ್ಲಿ ಗೆಲುವು ಸಾಧಿಸಿತ್ತು.