ಆಯುಷ್ಮಾನ್‌ ಭಾರತ್‌ ಫಲಾನುಭವಿಗಳಿಗಾಗಿ ವೆಬ್‌ಸೈಟ್‌

0
642

ದೇಶದ ಜನರಿಗೆ ಆರೋಗ್ಯ ರಕ್ಷೆ ನೀಡುವ ‘ಆಯುಷ್ಮಾನ್‌ ಭಾರತ್‌’ ಯೋಜನೆಯ ಫಲಾನುಭವಿಗಳಿಗಾಗಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ರೂಪಿಸಲಾಗಿದೆ.

ಹೊಸದಿಲ್ಲಿ: ದೇಶದ ಜನರಿಗೆ ಆರೋಗ್ಯ ರಕ್ಷೆ ನೀಡುವ ‘ಆಯುಷ್ಮಾನ್‌ ಭಾರತ್‌’ ಯೋಜನೆಯ ಫಲಾನುಭವಿಗಳಿಗಾಗಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ರೂಪಿಸಲಾಗಿದೆ. 

ಆಯುಷ್ಮಾನ್‌ ಭಾರತ್‌ ಆರೋಗ್ಯ ರಕ್ಷೆ ಮಿಷನ್‌(ಎಬಿ-ಎನ್‌ಎಚ್‌ಪಿಎಂ) ಅನ್ನು ಜಾರಿಗೊಳಿಸುವ ನ್ಯಾಷನಲ್‌ ಹೆಲ್ಟ್‌ ಏಜೆನ್ಸಿ(ಎನ್‌ಎಚ್‌ಎ) ಹೊಸ ವೆಬ್‌ಸೈಟ್‌ಗೆ ಚಾಲನೆ ನೀಡಿದೆ. ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿದೆಯೇ ಇಲ್ಲವೇ ಅಥವಾ ಇತರೆ ಸಂದೇಹಗಳ ಬಗ್ಗೆ ವೆಬ್‌ಸೈಟ್‌ ಮತ್ತು ಸಹಾಯವಾಣಿಯಿಂದ ಫಲಾನುಭವಿಗಳು ಉತ್ತರ ಪಡೆಯಬಹುದಾಗಿದೆ. 

ಕುಟುಂಬಕ್ಕೆ 5 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು(ಪಿಎಂಜೆಎವೈ) 10 ಕೋಟಿ ಬಡ ಕುಟುಂಬಗಳ 50 ಕೋಟಿ ಜನರಿಗೆ ಅನ್ವಯವಾಗಲಿದೆ. 

https://mera.pmjay.gov.in ಅಥವಾ ಸಹಾಯವಾಣಿಗೆ(14555) ಕರೆ ಮಾಡಿ ತಮ್ಮ ಹೆಸರು ನೋಂದಣಿಯಾಗಿದೆಯೇ ಇಲ್ಲವೇ ಅನ್ನುವುದನ್ನು ಫಲಾನುಭವಿಗಳು ತಿಳಿಯಬಹುದಾಗಿದೆ. ಪಿಎಂಜೆಎವೈಗೆ ನೋಂದಣಿ ಮಾಡಿಕೊಡುವುದಾಗಿ ಭರವಸೆ ನೀಡುವ ಹಲವು ನಕಲಿ ವೆಬ್‌ಸೈಟ್‌ಗಳನ್ನು ನಿಯಂತ್ರಿಸಲು ಅಧಿಕೃತ ವೆಬ್‌ಸೈಟ್‌ ಅನ್ನು ಸರಕಾರ ರೂಪಿಸಿದೆ.