ಆಮ್​ ಆದ್ಮಿ ಪಕ್ಷದ ಶಾಸಕನಿಗೆ 3 ತಿಂಗಳು ಜೈಲು ಶಿಕ್ಷೆ

0
18

ಮತದಾನದ ಕೇಂದ್ರದೊಳಗೆ ನುಗ್ಗಿ ಮತದಾನ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಿದ ಆರೋಪದಲ್ಲಿ ಜನಪ್ರತಿನಿಧಿಗಳ ತ್ವರಿತ ನ್ಯಾಯಾಲಯ ಆಮ್​ ಆದ್ಮಿ ಪಕ್ಷದ ಶಾಸಕ ಮನೋಜ್​ ಕುಮಾರ್​ಗೆ 3 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

ನವದೆಹಲಿ: ಮತದಾನದ ಕೇಂದ್ರದೊಳಗೆ ನುಗ್ಗಿ ಮತದಾನ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಿದ ಆರೋಪದಲ್ಲಿ ಜನಪ್ರತಿನಿಧಿಗಳ ತ್ವರಿತ ನ್ಯಾಯಾಲಯ ಆಮ್​ ಆದ್ಮಿ ಪಕ್ಷದ ಶಾಸಕ ಮನೋಜ್​ ಕುಮಾರ್​ಗೆ 3 ತಿಂಗಳು ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.

2013ರ ವಿಧಾನಸಭೆ ಚುನಾವಣೆ ವೇಳೆ ದೆಹಲಿಯ ಕಲ್ಯಾಣ್​ಪುರಿ ಪ್ರದೇಶದ ಎಂಸಿಡಿ ಮತಗಟ್ಟೆಗೆ ಎದುರು ಅಂದಾಜು 50ಕ್ಕೂ ಹೆಚ್ಚು ಜನರ ಜತೆ ಸ್ವತಃ ಅಭ್ಯರ್ಥಿಯಾಗಿದ್ದ ಮನೋಜ್​ ಕುಮಾರ್​ ಪ್ರತಿಭಟನೆ ನಡೆಸಿ ಮತದಾನ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಿದ್ದರು. ಇದರಿಂದ ಮತದಾರರಿಗೆ ತುಂಬಾ ತೊಂದರೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೋಜ್​ ಕುಮಾರ್​ ವಿರುದ್ಧ ದೂರು ದಾಖಲಿಸಿದ್ದರು.

ಇದರ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಸಮರ್​ ವಿಶಾಲ್​, ಭಾರತೀಯ ದಂಡ ಸಂಹಿತೆ 186ರ ಪ್ರಕಾರ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಜನಪ್ರತಿನಿಧಿಗಳ ಕಾಯ್ದೆಯ ವಿಧಿ 131ರ ಪ್ರಕಾರ ಮತಗಟ್ಟೆಯ ಬಳಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಮನೋಜ್​ ಕುಮಾರ್​ ದೋಷಿ ಎಂದು ಜೂ.11ರಂದೇ ಘೋಷಿಸಿದ್ದರು. ಜೂನ್ 25 ರ ಮಂಗಳವಾರ ಅವರಿಗೆ ಶಿಕ್ಷೆ ಪ್ರಮಾಣ ಘೋಷಿಸಿದರು.

ಮೇಲ್ಮನವಿ ಸಲ್ಲಿಸಲು ಅವಕಾಶ
ದೆಹಲಿಯ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮನೋಜ್​ ಕುಮಾರ್​ಗೆ ಜನಪ್ರತಿನಿಧಿಗಳ ತ್ವರಿತ ನ್ಯಾಯಾಲಯ ಜಾಮೀನು ನೀಡಿದೆ. ಅಲ್ಲದೆ, ತೀರ್ಪಿನ ವಿರುದ್ಧ ಉನ್ನತ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.