ಆಮದು ಸುಂಕ ಏರಿಕೆ: ಎಸಿ, ಫ್ರಿಜ್‌ ಸೇರಿ 19 ವಸ್ತುಗಳ ಬೆಲೆ ಹೆಚ್ಚಳ

0
513

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಏರ್‌ ಕಂಡೀಷನರ್‌ಗಳು, ರೆಫ್ರಿಜಿರೇಟರ್‌ ಮತ್ತು ವಾಷಿಂಗ್‌ ಮೆಷಿನ್‌ಗಳು (10 ಕೆ.ಜಿಗಿಂತ ಕಡಿಮೆ ತೂಕ) ದುಬಾರಿಯಾಗಲಿವೆ. ಇವುಗಳ ಮೇಲಿನ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಅಂದರೆ, ಈಗಿನ ಶೇ.10ರಿಂದ 20ಕ್ಕೆ ಕೇಂದ್ರ ಸರಕಾರ ಏರಿಕೆ ಮಾಡಿದೆ. ಇದು
ಸೆಪ್ಟೆಂಬರ್ 26 ರ ಬುಧವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದೆ.

ಹೊಸದಿಲ್ಲಿ : ವಿದೇಶಗಳಿಂದ ಆಮದು ಮಾಡಿಕೊಳ್ಳುವ ಏರ್‌ ಕಂಡೀಷನರ್‌ಗಳು, ರೆಫ್ರಿಜಿರೇಟರ್‌ ಮತ್ತು ವಾಷಿಂಗ್‌ ಮೆಷಿನ್‌ಗಳು (10 ಕೆ.ಜಿಗಿಂತ ಕಡಿಮೆ ತೂಕ) ದುಬಾರಿಯಾಗಲಿವೆ. ಇವುಗಳ ಮೇಲಿನ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಅಂದರೆ, ಈಗಿನ ಶೇ.10ರಿಂದ 20ಕ್ಕೆ ಕೇಂದ್ರ ಸರಕಾರ ಏರಿಕೆ ಮಾಡಿದೆ. ಇದು ಬುಧವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಿದೆ. 

ಇವೂ ಸೇರಿದಂತೆ ನಿತ್ಯ ಬಳಕೆಗೆ ಅನಗತ್ಯವಾದ 19 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಿದೆ. ”ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ನಿಭಾಯಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಹಣಕಾಸು ಸಚಿವಾಲಯ ಹೇಳಿದೆ. 

ಈ ವಸ್ತುಗಳ ಒಟ್ಟು ಆಮದು ಮೌಲ್ಯವು 86,000 ಕೋಟಿ ರೂ. ಇದೆ. ಜ್ಯುವೆಲರಿ ವಸ್ತುಗಳು, ಅಡುಗೆಮನೆ ಮತ್ತು ಟೇಬಲ್‌ವೇರ್‌, ಕೆಲವು ಪ್ಲಾಸ್ತಿಕ್‌ ವಸ್ತುಗಳು ಮತ್ತು ಸೂಟ್‌ಕೇಸ್‌ಗಳ ಮೇಲಿನ ಆಮದು ಸುಂಕ ಏರಿಕೆಯಾಗಿದೆ. 

ಯಾವ ಪದಾರ್ಥಕ್ಕೆ ಎಷ್ಟು? 

ಏರ್‌ ಕಂಡೀಷನರ್‌ ಶೇ.20(ಶೇ.10

ರೆಫ್ರಿಜಿರೇಟರ್‌ ಶೇ.20(ಶೇ.10

ವಾಷಿಂಗ್‌ಮೆಷಿನ್‌ ಶೇ.20(ಶೇ.10

ಸ್ಪೀಕರ್‌ಗಳು ಶೇ.15(ಶೇ.10

ಟ್ರಂಕ್‌ಗಳು, ಸೂಟ್‌ಕೇಸ್‌, ಬ್ರೀಫ್‌ ಕೇಸ್‌, ಟ್ರಾವೆಲ್‌ ಬ್ಯಾಗ್‌ ಶೇ.15(ಶೇ.10

ವಿಮಾನ ಇಂಧನ ಶೇ.0(ಶೇ.5

ಸ್ಥಳೀಯ ವಸ್ತುಗಳಿಗೆ ಅನ್ವಯವಾಗದು 

ರೂಪಾಯಿ ಮೌಲ್ಯದ ಕುಸಿತ ತಡೆಯುವ ನಿಟ್ಟಿನಲ್ಲಿ ಆಮದು ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದರ ಒಂದು ಭಾಗವಾಗಿ 19 ಆಮದು ವಸ್ತುಗಳ ಮೇಲಿನ ಸುಂಕವನ್ನು ಏರಿಸಿದೆ. ಹೀಗಾಗಿ, ಆಮದು ವಸ್ತುಗಳ ದರ ಏರಿಕೆಯಾಗುತ್ತದೆ. ಸ್ಥಳೀಯ ವಸ್ತುಗಳಿಗೆ ಇದು ಅನ್ವಯವಾಗುವುದಿಲ್ಲ. ಸ್ಯಾಮ್‌ಸಂಗ್‌, ಎಲ್‌ಜಿ, ಸೋನಿ ಮತ್ತಿತರ ಕಂಪನಿಗಳು ದೇಶದಲ್ಲಿ ಉತ್ಪಾದನೆ ಮಾಡುವ ವಸ್ತುಗಳಿಗೆ ಸುಂಕ ಅನ್ವಯವಾಗದು.