ಆಫ್ರಾಏಷ್ಯಾ ಬ್ಯಾಂಕ್‌ನ ಜಾಗತಿಕ ಸಂಪತ್ತು ಪರಾಮರ್ಶೆ ವರದಿ : ಕುಬೇರರ ಸಂಖ್ಯೆಯಲ್ಲಿ ಹೆಚ್ಚಳ

0
19

ಅತಿ ಹೆಚ್ಚು ಸಂಖ್ಯೆಯ ಕುಬೇರರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಹತ್ತು ವರ್ಷಗಳಲ್ಲಿ ಈ ಆಗರ್ಭ ಸಿರಿವಂತರ ಪಟ್ಟಿಗೆ 238 ಜನರು ಹೆಚ್ಚಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ನವದೆಹಲಿ: ಅತಿ ಹೆಚ್ಚು ಸಂಖ್ಯೆಯ ಕುಬೇರರು ಇರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಹತ್ತು ವರ್ಷಗಳಲ್ಲಿ ಈ ಆಗರ್ಭ ಸಿರಿವಂತರ ಪಟ್ಟಿಗೆ 238 ಜನರು ಹೆಚ್ಚಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಆಫ್ರಾಏಷ್ಯಾ ಬ್ಯಾಂಕ್‌ನ ಜಾಗತಿಕ ಸಂಪತ್ತು ಪರಾಮರ್ಶೆ ವರದಿಯಲ್ಲಿ ಈ ವಿವರಗಳಿವೆ.  6,500 ಕೋಟಿಗಿಂತಲೂ ಹೆಚ್ಚು ಸಂಪತ್ತು ಹೊಂದಿದವರನ್ನು ಕುಬೇರರು ಎಂದು ಪರಿಗಣಿಸಲಾಗುತ್ತಿದೆ.

ಸದ್ಯಕ್ಕೆ ದೇಶದಲ್ಲಿ ಇಂತಹ ಕುಬೇರರ ಸಂಖ್ಯೆ 119 ಇದೆ. 2027ರ ಹೊತ್ತಿಗೆ ಇವರ ಸಂಖ್ಯೆ 357ಕ್ಕೆ ಏರುವ ನಿರೀಕ್ಷೆ ಇದೆ. ಮುಂದಿನ 10 ವರ್ಷಗಳಲ್ಲಿ 238 ಕುಬೇರರು ಹೆಚ್ಚುವರಿಯಾಗಿ ಸೃಷ್ಟಿಯಾಗಲಿದ್ದಾರೆ. ಚೀನಾದಲ್ಲಿ ಇಂತಹ ಹೊಸ ಶ್ರೀಮಂತರ ಸಂಖ್ಯೆ 448ಕ್ಕೆ ತಲುಪಲಿದೆ. ಅಮೆರಿಕದಲ್ಲಿ ಗರಿಷ್ಠ ಎನ್ನಬಹುದಾದ 884  ಕುಬೇರರು ಇರಲಿದ್ದಾರೆ.

ದೇಶದ ಜನರು ಹೊಂದಿರುವ ಒಟ್ಟಾರೆ ಸಂಪತ್ತಿನ ಲೆಕ್ಕದಲ್ಲಿ ಭಾರತ ವಿಶ್ವದಲ್ಲಿ 6ನೇ ಸ್ಥಾನದಲ್ಲಿ ಇದೆ. ಭಾರತೀಯರ ಒಟ್ಟಾರೆ ಸಂಪತ್ತು 534 ಲಕ್ಷ ಕೋಟಿಗಳಷ್ಟಿದೆ. ಈ ಲೆಕ್ಕದಲ್ಲಿ ಭಾರತ ವಿಶ್ವದಲ್ಲಿನ 6ನೇ ಸಿರಿವಂತ ದೇಶವಾಗಿದೆ. ಅಮೆರಿಕವು 4,067 ಲಕ್ಷ ಕೋಟಿಗಳಷ್ಟು ಸಂಪತ್ತಿನ ಮೂಲಕ ಮೊದಲ ಸ್ಥಾನದಲ್ಲಿ ಇದೆ.