ಆನ್‌ಲೈನ್‌ ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿ

0
431

ರಾಜ್ಯದಲ್ಲಿ ಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲು ಇ-ಸ್ಟಾಂಪಿಂಗ್‌ ವ್ಯವಸ್ಥೆಯನ್ನು ರಾಜ್ಯ ಸರಕಾರ ಜಾರಿ ಮಾಡಿದೆ.

ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲು ಇ-ಸ್ಟಾಂಪಿಂಗ್‌ ವ್ಯವಸ್ಥೆಯನ್ನು ರಾಜ್ಯ ಸರಕಾರ ಜಾರಿ ಮಾಡಿದೆ. 

ಪ್ರಸ್ತುತ ದಿಲ್ಲಿ ಸರಕಾರದಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿದ್ದು, ಸುರಕ್ಷಿತ ವಿಧಾನ ಎಂಬುದು ಖಾತರಿಯಾದ ಬಳಿಕ ರಾಜ್ಯದಲ್ಲೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇ-ಸ್ಟಾಂಪಿಂಗ್‌ ಜಾರಿಗೊಳಿಸಿದೆ. 

ಆರಂಭಿಕವಾಗಿ ಕನಿಷ್ಟ 50 ರೂ.ಗಳಿಂದ ಗರಿಷ್ಠ 50 ಸಾವಿರ ರೂ.ಗಳ ವರೆಗೆ ಸೀಮಿತವಾಗಿ ಇ-ಸ್ಟಾಂಪಿಂಗ್‌ ಜಾರಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಹೆಸರು, ವಿಳಾಸ ಮತ್ತಿತರ ವಿವರಗಳನ್ನು ದಾಖಲಿಸಿದ ಬಳಿಕ ವ್ಯವಹಾರದ ಉಲ್ಲೇಖ ಸಂಖ್ಯೆ ಪಡೆದುಕೊಂಡು ನೆಟ್‌ ಬ್ಯಾಂಕಿಂಗ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಹಣ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಇದೇ ಮಾದರಿಯಲ್ಲಿ ಕನಿಷ್ಟ 50 ರೂ.ಗಳಿಂದ ಗರಿಷ್ಠ 15 ಸಾವಿರ ರೂ.ವರೆಗೆ ಆನ್‌ಲೈನ್‌ನಲ್ಲಿ ಇ-ಕೋರ್ಟ್‌ ಶುಲ್ಕ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.