ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಗಡುವು ವಿಸ್ತರಣೆ

0
18

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಮತ್ತೆ ವಿಸ್ತರಿಸಲಾಗಿದ್ದು, 2019ರ ಮಾರ್ಚ್ 31ರವರೆಗೂ ಅವಕಾಶ ಕಲ್ಪಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಹೊಸದಿಲ್ಲಿ: ಆಧಾರ್‌ ಮತ್ತು ಪ್ಯಾನ್‌ ಕಾರ್ಡ್ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಮತ್ತೆ ವಿಸ್ತರಿಸಲಾಗಿದ್ದು, 2019ರ ಮಾರ್ಚ್ 31ರವರೆಗೂ ಅವಕಾಶ ಕಲ್ಪಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. 

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್ ಸಂಖ್ಯೆಯ ಜೋಡಣೆಗೆ ನೀಡಿದ ಗಡುವನ್ನು ಸರಕಾರ ಐದನೇ ಬಾರಿ ವಿಸ್ತರಿಸಿದ್ದು, ಈಗ ಜೂನ್ 30 ರಂದು ಅಂತ್ಯವಾಗಬೇಕಿದ್ದ ಗಡುವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮತ್ತೆ ವಿಸ್ತರಿಸಿದೆ. 

 ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಗಡುವು ಅಂತ್ಯ 

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 119ರ ಅಡಿಯಲ್ಲಿ ಈ ಗಡುವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಮಾರ್ಚ್ 27ರಂದು ಗಡುವು ವಿಸ್ತರಣೆ ಮಾಡಿದ್ದ ಇಲಾಖೆ, ಜೂನ್ 30 ರವರೆಗೆ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್ ಸಂಖ್ಯೆಯ ಜೋಡಣೆ ಮಾಡಬಹುದೆಂದು ಹೇಳಿತ್ತು.