ಆಧಾರ್‌ ಬಳಕೆ: ಬ್ಯಾಂಕ್‌ಗಳಿಗೆ ಯುಐಡಿಐ ಮಾರ್ಗಸೂಚಿ

0
368

ಆಧಾರ್‌ ಬಳಕೆ ಬಗೆಗಿನ ಗೊಂದಲಗಳಿಗೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟೀಕರಣ ನೀಡಿದ್ದು, ಸರಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಗೆ ‘ಆಧಾರ್‌ ಇ-ಕೆವೈಸಿ’ ಬಳಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಹೊಸದಿಲ್ಲಿ:  ಆಧಾರ್‌  ಬಳಕೆ ಬಗೆಗಿನ ಗೊಂದಲಗಳಿಗೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಸ್ಪಷ್ಟೀಕರಣ ನೀಡಿದ್ದು, ಸರಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಗೆ ‘ಆಧಾರ್‌ ಇ-ಕೆವೈಸಿ’ ಬಳಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದೆ. 

ಆಧಾರ್‌ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಬಳಿಕ, ಕಾನೂನು ಸಲಹೆ ಕೇಳಿ ಯುಐಡಿಎಐಗೆ ಬ್ಯಾಂಕ್‌ಗಳ ಪತ್ರ ಬರೆದಿದ್ದವು. 

ಈ ಸಂಬಂಧ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಯುಐಡಿಎಐ ವಿವರಣೆ ನೀಡಿದೆ. ”ಸರಕಾರದ ಯೋಜನೆಗೆ ಆಧಾರ್‌ ಇ-ಕೆವೈಸಿ ಬಳಸಬಹುದು. ಗ್ರಾಹಕರ ದೃಢೀಕರಣಕ್ಕೂ ಬಳಸಿ, ಆದರೆ, ಇದು ಕಡ್ಡಾಯವಾಗಬಾರದು,” ಎಂದು ಪತ್ರದಲ್ಲಿ ಹೇಳಲಾಗಿದೆ.