ಆದಾಯ ತೆರಿಗೆ : ನಿವೃತ್ತರಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯ

0
35

ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಪಿಂಚಣಿ ಪಡೆಯುವ ನಿವೃತ್ತರು ₹ 40 ಸಾವಿರದವರೆಗೂ ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ ತೆರಿಗೆ ವಿನಾಯ್ತಿ ಪಡೆಯಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ನವದೆಹಲಿ : ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಪಿಂಚಣಿ ಪಡೆಯುವ ನಿವೃತ್ತರು   40 ಸಾವಿರದವರೆಗೂ ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ ತೆರಿಗೆ ವಿನಾಯ್ತಿ ಪಡೆಯಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಯಾವುದೇ ದಾಖಲೆಗಳನ್ನು ಸಲ್ಲಿಸದೇ ತೆರಿಗೆ ವಿನಾಯ್ತಿ ಪಡೆಯಲು ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ ಎನ್ನುತ್ತಾರೆ.

2018–19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಆದಾಯ ತೆರಿಗೆ ಪಾವತಿದಾರರಿಗೆ ವಿನಾಯ್ತಿ ಮಿತಿ ಹೆಚ್ಚಿಸಿಲ್ಲ. ಆದರೆ, ವೇತನ ವರ್ಗದವರಿಗೆ ಮತ್ತು ಪಿಂಚಣಿದಾರರಿಗೆ ಸಾರಿಗೆ ಭತ್ಯೆ ಮತ್ತು ಇತರೇ ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲಿ  40 ಸಾವಿರದ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೌಲಭ್ಯ ನೀಡಿದ್ದಾರೆ.

ತಾವು ದುಡಿದ ಸಂಸ್ಥೆಯಿಂದ ಪಿಂಚಣಿ ಪಡೆಯುವವರು ಈ ಸೌಲಭ್ಯಕ್ಕೆ ಅರ್ಹರಾಗಿರುವರೇ ಎಂದು ಅನೇಕರು ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ (ಸಿಬಿಡಿಟಿ) ಸ್ಪಷ್ಟನೆ ಕೇಳಿದ್ದರು.