ಈ ಕೆಳಗೆ ಕ್ರಿಕೆಟ್ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.
ಬಿಸಿಸಿಐಗೆ ಪೇಟಿಎಂ ಪ್ರಾಯೋಜಕತ್ವ
ಬೆಂಗಳೂರು: ಭಾರತದಲ್ಲಿ 2023 ರವರೆಗೆ ನಡೆಯಲಿರುವ ದೇಶಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಮುಖ್ಯ ಪ್ರಾಯೋಜಕತ್ವವನ್ನು ಪೇಟಿಎಂ ಡಿಜಿಟಲ್ ಹಣಕಾಸು ಸಂಸ್ಥೆಯು ಪಡೆದುಕೊಂಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡ ಳಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಪೇಟಿಎಂ 326.80 ಕೋಟಿ ಮೊತ್ತ ನೀಡಲಿದೆ. 2015ರಲ್ಲಿ ಭಾರತ ತಂಡದ ಮುಖ್ಯ ಪ್ರಾಯೋಜಕತ್ವವನ್ನು ಸಂಸ್ಥೆ ಪಡೆದಿತ್ತು. ಇದಕ್ಕೂ ಮುನ್ನ ಮೈಕ್ರೊಮ್ಯಾಕ್ಸ್ ಸಂಸ್ಥೆಯು ಪ್ರತಿ ಪಂದ್ಯಕ್ಕೆ 2.2 ಕೋಟಿ ನೀಡುತ್ತಿತ್ತು. ಬಳಿಕ 2.4 ಕೋಟಿ ರೂ. (ಪ್ರತಿ ಪಂದ್ಯಕ್ಕೆ) ಮೊತ್ತ ನೀಡಿ ಪೇಟಿಯಂ ಈ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಬಿಸಿಸಿಐ ಮತ್ತು ಪೇಟಿಯಂ ಜೊತೆಗಿನ ಒಪ್ಪಂದ ಈಚೆಗೆ ಅಂತ್ಯಗೊಂಡಿತ್ತು.
“ಲ್ಯಾನ್ಸ್ ಕ್ಲೂಸ್ನರ್” ದಕ್ಷಿಣ ಆಫ್ರಿಕಾ ತಂಡದ ಸಹಾಯಕ ಬ್ಯಾಟಿಂಗ್ ಕೋಚ್
ಜೋಹಾನ್ಸ್ಬರ್ಗ್ (ಪಿಟಿಐ): ಹಿರಿಯ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ಅವರನ್ನು ದಕ್ಷಿಣ ಆಫ್ರಿಕಾ ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಹರಿಣಪಡೆಯು ಟ್ವೆಂಟಿ–20 ಹಾಗೂ ಟೆಸ್ಟ್ ಸರಣಿ ಆಡಲು ಸೆಪ್ಟಂಬರ್ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ.
ರಾಷ್ಟ್ರೀಯ ತಂಡದ ಹಿರಿಯ ವೇಗಿ ವಿನ್ಸೆಂಟ್ ಬರ್ನೆಸ್ ಅವರನ್ನು ಸಹಾಯಕ ಬೌಲಿಂಗ್ ಕೋಚ್ ಆಗಿಯೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್ಎ) ನೇಮಕ ಮಾಡಿದೆ. ಜಸ್ಟಿನ್ ಒಂಟಾಂಗ್ ಸಹಾಯಕ ಫೀಲ್ಡಿಂಗ್ ಕೋಚ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.