ಆಗಸ್ಟ್ 24 ರ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು

0
38

ಈ ಕೆಳಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಐಎಸ್‌ಎಸ್‌ ಪ್ರವೇಶಿಸದ ‘ಫಿಡೋರ್‌’

ಮಾಸ್ಕೊ(ಎಎಫ್‌ಪಿ): ಮನುಷ್ಯರನ್ನೇ ಹೋಲುವ ‘ಫಿಡೋರ್‌’ ರೋಬೊ ಹೊತ್ತೊಯ್ದಿದ್ದ ರಷ್ಯಾದ ಮಾನವರಹಿತ ಗಗನನೌಕೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ(ಐಎಸ್‌ಎಸ್‌)ಜತೆ ಜೋಡಣೆಯಾಗುವಲ್ಲಿ (ಡಾಕಿಂಗ್‌) ವಿಫಲವಾಗಿದೆ. 

‘ಸೊಯುಜ್‌ ಎಂಎಸ್‌ 14’ ರಾಕೆಟ್‌ ಆಗಸ್ಟ್ 22 ರ ಗುರುವಾರ ಉಡಾವಣೆಯಾಗಿತ್ತು. ನಿಗದಿಯಂತೆ ಆಗಸ್ಟ್ 24 ರ ಶನಿವಾರ ಬೆಳಗ್ಗೆ 5.30ಕ್ಕೆ ಐಎಸ್‌ಎಸ್‌ಗೆ ಈ ನೌಕೆ ಜೋಡಣೆಯಾಗಬೇಕಿತ್ತು. ಆದರೆ ‘ಐಎಸ್‌ಎಸ್‌ಗೆ 100 ಮೀ.ದೂರದಲ್ಲಿರುವಾಗ ನಿಗದಿತ ಪಥದಲ್ಲಿ ನೌಕೆ ಮುಂದುವರಿದಿಲ್ಲ. ಹೀಗಾಗಿ ರಷ್ಯಾದ ಅಂತರಿಕ್ಷಯಾತ್ರಿಗಳು ಕೊನೇ ಕ್ಷಣದಲ್ಲಿ ಸ್ವಯಂಚಾಲಿತ ಜೋಡಣೆ ಪ್ರಕ್ರಿಯೆಯನ್ನು ರದ್ದುಗೊಳಿಸಿದರು’ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ. 

‘ಐಎಸ್‌ಎಸ್‌ನಲ್ಲಿನ ಸಮಸ್ಯೆಯಿಂದಾಗಿ ಜೋಡಣೆ ಸಾಧ್ಯವಾಗಲಿಲ್ಲ. ಸೊಯುಜ್‌ ನೌಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲವೆಂದು ರಷ್ಯಾದ ವಿಜ್ಞಾನಿಗಳು ತಿಳಿಸಿದ್ದಾರೆ.
 
ರಷ್ಯಾದಿಂದ ಕ್ಷಿಪಣಿ ಉಡಾವಣೆ ಯಶಸ್ವಿ

ಮಾಸ್ಕೊ (ರಾಯಿಟರ್ಸ್): ಯುದ್ಧ ತರಬೇತಿ ಅಂಗವಾಗಿ ಎರಡು ಜಲಾಂತರ್ಗಾಮಿ ಗುರುತ್ವಬಲ ಕ್ಷಿಪಣಿಗಳನ್ನು ರಷ್ಯಾ ಆಗಸ್ಟ್ 24 ರ ಶನಿವಾರ ಉಡಾವಣೆ ಮಾಡಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

‘ಉಡಾವಣೆ ವೇಳೆ ಎಲ್ಲಾ ತಾಂತ್ರಿಕ ಅಂಶಗಳು ನಿಖರವಾಗಿದ್ದವು’ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.

ಉತ್ತರ ಕೊರಿಯಾದಿಂದಲೂ ಪರೀಕ್ಷೆ: (ಸೋಲ್‌ ವರದಿ): ಉತ್ತರ ಕೊರಿಯಾ ಆಗಸ್ಟ್ 24 ರ ಶನಿವಾರ ಎರಡು ಕಡಿಮೆ ವ್ಯಾಪ್ತಿಯ ಗುರುತ್ವಬಲ ಕ್ಷಿಪಣಿಗಳನ್ನು ಪರೀಕ್ಷಾರ್ಥ ಉಡಾವಣೆ ಮಾಡಿದೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.
 
ಅಮೆರಿಕ–ದಕ್ಷಿಣ ಕೊರಿಯಾ ಜಂಟಿ ಸೇನಾ ಕವಾಯತು ಪೂರ್ಣಗೊಳಿಸಿದ ಬೆನ್ನಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆದಿದೆ.