ಆಗಸ್ಟ್ 22 ರಾಜ್ಯಗಳಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು

0
26

ಈ ಕೆಳಗೆ ರಾಜ್ಯ ಮಟ್ಟದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ರಾಜಸ್ಥಾನದ 13 ಮರಳುಗಾಡು ಜಿಲ್ಲೆಗಳ ನಿವಾಸಿಗಳಿಗೆ ತಲಾ 70 ಲೀ. ಉಚಿತ ನೀರು ನೀಡಲು ಸರ್ಕಾರದ ನಿರ್ಧಾರ

ಜೈಪುರ: ರಾಜಸ್ಥಾನದ 13 ಮರಳುಗಾಡು ಜಿಲ್ಲೆಗಳ ನಿವಾಸಿಗಳಿಗೆ ಪ್ರತಿದಿನ ತಲಾ 70 ಲೀ. ಉಚಿತ ನೀರು ನೀಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಜಾನುವಾರುಗಳ ಅವಶ್ಯಕತೆಯನ್ನು ಪೂರೈಸುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಲಾಗಿದೆ.

ರಾಜ್ಯ ಹಣಕಾಸು ಸಚಿವಾಲಯ ಈ ಸಂಬಂಧ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಿಎಂ ಅಶೋಕ್​ ಗೆಹ್ಲೋಟ್​ ಅನುಮೋದಿಸಿದ್ದಾಗಿ ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಇಂಜಿನಿಯರಿಂಗ್​ ಇಲಾಖೆ ಹೆಚ್ಚುವರಿ ನೀರನ್ನು ಒದಗಿಸಲಿದೆ.

ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿ ವಾಸವಾಗಿರುವವರ ದೈನಂದಿನ ಅವಶ್ಯಕತೆ ಪೂರೈಸಿಕೊಳ್ಳಲು ಪ್ರತಿದಿನ ತಲಾ 40 ಲೀ. ನೀರನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ಹಸು, ಒಂಟೆ, ಕೋಳಿಯಂಥ ಜಾನುವಾರುಗಳನ್ನು ಸಾಕಲಾಗುತ್ತದೆ. ಅವುಗಳ ಅವಶ್ಯಕತೆ ಪೂರೈಸಲು ದಿನಕ್ಕೆ 30 ಲೀ. ಹೆಚ್ಚುವರಿ ನೀರಿನ ಅವಶ್ಯಕತೆ ಇರುತ್ತದೆ. ಇದನ್ನು ಮನಗಂಡು ಸರ್ಕಾರ 40 ಲೀ. ಜತೆಗೆ ಹೆಚ್ಚುವರಿಯಾಗಿ 30 ಲೀ. ನೀರು ಸೇರಿಸಿ ಉಚಿತವಾಗಿ ಸರಬರಾಜು ಮಾಡಲು ನಿರ್ಧರಿಸಿತು ಎನ್ನಲಾಗಿದೆ. (ಏಜೆನ್ಸೀಸ್​)

 

ಕೇರಳದ ಸರ್ಕಾರಿ ಕಚೇರಿಗಳ ಚಾಲಕ ಹುದ್ದೆಗಳಿಗೆ ಮಹಿಳೆಯರೂ ನೇಮಕ; ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ನಿರ್ಧಾ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನೊಂದನ್ನು ಕೈಗೊಂಡಿದ್ದು ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ.

ಸರ್ಕಾರಿ ಕಚೇರಿಗಳು ಹಾಗೂ ಇತರ ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಚಾಲಕರ ಹುದ್ದೆಗಳನ್ನು ಮಹಿಳೆಯರನ್ನೂ ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಸಮಾಜದ ಎಲ್ಲ ಹಂತಗಳಲ್ಲೂ ಲಿಂಗ ಸಮಾನತೆಯನ್ನು ಸೃಷ್ಟಿಸುವ ಸಲುವಾಗಿ ಈ ತೀರ್ಮಾನ ಕೈಗೊಂಡಿದ್ದಾಗಿ ಕೇರಳ ಸರ್ಕಾರ ತಿಳಿಸಿದೆ. ಇದು ಕೂಡ ದೇಶದಲ್ಲೇ ಮೊದಲು ಎನ್ನಿಸಿಕೊಳ್ಳಲಿದೆ.

ಸಭೆಯ ಬಳಿಕ ಟ್ವೀಟ್​ ಮಾಡಿರುವ ರಾಜ್ಯ ಹಣಕಾಸು ಸಚಿವ ಥಾಮಸ್​ ಐಸಾಕ್​, ರಾಜ್ಯ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಅಗತ್ಯವಿರುವ ಚಾಲಕ ಹುದ್ದೆಗಳಿಗೆ ಮಹಿಳೆಯರನ್ನು ಕೂಡ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಸೂಕ್ತರೀತಿಯಲ್ಲಿ ತಿದ್ದುಪಡಿ ಮಾಡಲಾಗುವುದು. ಪುರುಷರ ಮತ್ತೊಂದು ಭದ್ರಕೋಟೆಗೆ ಮಹಿಳೆಯರು ಲಗ್ಗೆಯಿಟ್ಟಂತಾಯಿತು ಎಂದಿದ್ದಾರೆ.

ಇತ್ತೀಚೆಗಷ್ಟೇ ಕೇರಳ ರಾಜ್ಯ ಸರ್ಕಾರ ಪೊಲೀಸ್​ ಪಡೆಯಲ್ಲಿ ಮೊದಲ ಬಾರಿಗೆ 550 ಮಹಿಳಾ ಸದಸ್ಯರನ್ನೊಳಗೊಂಡ ಬೆಟಾಲಿಯನ್​ನ್ನು ರಚಿಸಿತ್ತು.

ಹಾಗೇ ಇನ್ನೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ರಾಜ್ಯ ಸರ್ಕಾರ, ರಾಷ್ಟ್ರೀಯ ಆಟಗಳಲ್ಲಿ ಪದಕಗಳಿಂದ ಪುರಸ್ಕೃತರಾದ ಒಟ್ಟು 83 ಆಟಗಾರರನ್ನು ವಿವಿಧ ಇಲಾಖೆಗಳಿಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ.