ಆಗಸ್ಟ್ 16 ರ “ವಾಣಿಜ್ಯ ವಿಭಾಗ”ದ ಪ್ರಚಲಿತ ಘಟನೆಗಳು

0
27

ಈ ಕೆಳಗೆ ವಾಣಿಜ್ಯ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಭಾರತಕ್ಕೆ ಕಚ್ಚಾ ತೈಲಪೂರೈಕೆ: ಮತ್ತೆ ಮುಂಚೂಣಿಗೆ ಸೌದಿ ಅರೇಬಿಯಾ

ನವದೆಹಲಿ (ಪಿಟಿಐ): ರಿಲಯನ್ಸ್‌ ಇಂಡಸ್ಟ್ರೀಸ್‌ನ ತೈಲ ಮತ್ತು ರಾಸಾಯನಿಕಗಳ (ಒ2ಸಿ) ವಹಿವಾಟಿನ ಶೇ 20ರಷ್ಟು ಪಾಲನ್ನು ಅರಾಮ್ಕೊ ಖರೀದಿಸಲಿರುವುದರಿಂದ ಸೌದಿ ಅರೇಬಿಯಾ, ಭಾರತದ ಅತಿದೊಡ್ಡ ತೈಲ ಪೂರೈಕೆ ದೇಶವಾಗಲಿದೆ.

ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ಸೌದಿ ಅರೇಬಿಯಾ ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಈ ಸ್ಥಾನವನ್ನು ಇರಾಕ್‌ಗೆ ಬಿಟ್ಟುಕೊಟ್ಟಿತ್ತು. ಸೌದಿ ಅರೇಬಿಯಾದ ಅರಾಮ್ಕೊ ಈಗ ‘ಆರ್‌ಐಎಲ್‌’ನ  ‘ಒ2ಸಿ’ ವಹಿವಾಟಿನಲ್ಲಿ ಪಾಲು ಖರೀದಿಸಲಿರುವುದರಿಂದ ಮತ್ತೆ ಮುಂಚೂಣಿಗೆ ಬರಲಿದೆ.

ಈ ಎರಡೂ ಸಂಸ್ಥೆಗಳ ನಡುವಣ ಒಪ್ಪಂದದಿಂದಾಗಿ ಅಲಾಮ್ಕೊ, ಪ್ರತಿ ದಿನ 5 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಪೂರೈಸಲಿದೆ. ಇದು ವರ್ಷಕ್ಕೆ 2.5 ಕೋಟಿ ಟನ್‌ಗಳಷ್ಟು ಆಗಲಿದೆ. ಭಾರತದಲ್ಲಿ ಇಂಧನ ಉತ್ಪನ್ನಗಳ ಮಾರಾಟ ಮಾಡಲು ಕೂಡ ಅರಾಮ್ಕೊ  ಆಸಕ್ತಿ ತಳೆದಿದೆ.
 
 
ಕೌಶಲ ಅಭಿವೃದ್ಧಿ ನಿಗಮದ ಜತೆ ಫ್ಲಿಪ್‍ಕಾರ್ಟ್ ಒಪ್ಪಂದ
 
ಬೆಂಗಳೂರು: ಇ-ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್, ದೇಶದಾದ್ಯಂತ ಇರುವ ತನ್ನ 20 ಸಾವಿರಕ್ಕೂ ಹೆಚ್ಚು ವಿತರಣಾ ಪ್ರತಿನಿಧಿಗಳಿಗೆ ತರಬೇತಿ ನೀಡಲು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಜತೆ (ಎನ್‍ಎಸ್‍ಡಿಸಿ) ಒಪ್ಪಂದ ಮಾಡಿಕೊಂಡಿದೆ.
 
ಉತ್ಪನ್ನಗಳ ವಿತರಣೆ ಮತ್ತು ಗ್ರಾಹಕರಿಗೆ ಒದಗಿಸುವ ಸೇವೆಯಲ್ಲಿ  ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚಿಸುವ ಮತ್ತು ಪ್ರಮಾಣೀಕರಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಬ್ಬಂದಿಯ ವೃತ್ತಿ ಪ್ರಗತಿಗೆ ಪೂರಕವಾದ ನೆರವು ನೀಡಲು ಬದ್ಧತೆ ಹೊಂದಿರುವ ಸಂಸ್ಥೆಯು ಇನ್ನೂ 30 ಸಾವಿರ ಜನರಿಗೆ ತರಬೇತಿ ನೀಡಲು ಉದ್ದೇಶಿಸಿದೆ.
 
ತರಬೇತಿ ಪೂರ್ಣಗೊಂಡ ಸಿಬ್ಬಂದಿಗೆ ಪ್ರಮಾಣ ಪತ್ರ ನೀಡಲಾಗುವುದು. ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ಸೇರಿದಂತೆ 7 ದೇಶಗಳಲ್ಲಿ ಈ ಪ್ರಮಾಣಪತ್ರವನ್ನು ಪರಿಗಣಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.