ಆಗಸ್ಟ್ 16 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

0
20

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ

ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಗೀತಿಕಾ ಜಾಖರ್ ಗೆ ಚಿನ್ನದ ಗರಿ

ಚಂಡೀಗಢ: ಹರಿಯಾಣದ ಉಪ ಪೊಲೀಸ್‌ ಅಧೀಕ್ಷಕಿ ಗೀತಿಕಾ ಜಾಖರ್ ಅವರು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದು, ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಹರಿಯಾಣದ ಉಪ ಪೊಲೀಸ್‌ ಅಧೀಕ್ಷಕಿ (ಡಿಎಸ್‌ಪಿ) ಗೀತಿಕಾ ಜಾಖರ್ ಅವರು ಇತ್ತೀಚೆಗೆ ಚೀನಾದ ಚೆಂಗ್ಡುನಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟುಕೊಟ್ಟಿದ್ದಾರೆ.

ಗೀತಿಕಾ ಜಾಖರ್ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಅವರು ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಅನೇಕ ದೇಶಗಳ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಹರಿಯಾಣ ಪೊಲೀಸ್ ಸಿಬ್ಬಂದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಆದರೆ. ಅಲ್ಲದೆ, ದೇಶದ ಪದಕಗಳ ಪಟ್ಟಿಯಲ್ಲೂ ತಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದಾರೆ ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.

 

ಬೌಲಿಂಗ್ ಕೋಚ್ ದೊಡ್ಡಗಣೇಶ್ ಅರ್ಜಿ

ಬೆಂಗಳೂರು: ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ಅವರು ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಆಗಸ್ಟ್ 19ರಂದು ಮುಂಬೈನಲ್ಲಿ ಕ್ರಿಕೆಟ್ ಸಲಹಾ ಸಮಿತಿಯು ನಡೆಸಲಿರುವ ಸಂದರ್ಶನಕ್ಕೆ ಅವರು ಹಾಜರಾಗಲಿದ್ದಾರೆ.

ಬೆಂಗಳೂರಿನ ದೊಡ್ಡಗಣೇಶ್ ಅವರು ಭಾರತ ತಂಡದ ಪರ ನಾಲ್ಕು ಟೆಸ್ಟ್, ಒಂದು ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದಾರೆ. 104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮಧ್ಯಮವೇಗಿ ದೊಡ್ಡಗಣೇಶ್ ಅವರ ಖಾತೆಯಲ್ಲಿ 365 ವಿಕೆಟ್‌ಗಳು ಇವೆ.  ಅವರು ಕೋಚ್ ಮತ್ತು  ಕರ್ನಾಟಕ ಸೀನಿಯರ್ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಚೆಗೆ ಅವರು ಗೋವಾ ರಣಜಿ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ, ರಾಬಿನ್ ಸಿಂಗ್, ಲಾಲ್‌ಚಂದ್ ರಜಪೂತ್ ಮತ್ತು ಟಾಮ್‌ ಮೂಡಿ ಸೇರಿದಂತೆ ಆರು ಜನ ರೇಸ್‌ನಲ್ಲಿದ್ದಾರೆ.

ಕಪಿಲ್‌ದೇವ್, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಇರುವ ಸಮಿತಿಯು ಕೋಚ್ ಆಯ್ಕೆಗೆ ಸಂದರ್ಶನ ನಡೆಸಲಿದೆ.
 
 
ಕ್ರಿಕೆಟಿಗ ಚಂದ್ರಶೇಖರ್ ನಿಧನ

ನವದೆಹಲಿ: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಹಾಗೂ ರಾಷ್ಟ್ರೀಯ ಆಯ್ಕೆಗಾರ ವಿ.ಬಿ. ಚಂದ್ರಶೇಖರ್ (58) ಹೃದಯಾಘಾತದಿಂದ ಆಗಸ್ಟ್ 15 ರ ಗುರುವಾರ ಚೆನ್ನೈನಲ್ಲಿ ನಿಧನ ಹೊಂದಿದರು.

ತಮಿಳುನಾಡಿನ ಚಂದ್ರಶೇಖರ್ 1988ರಿಂದ 1990ರ ನಡುವೆ ಭಾರತ ಪರ 7 ಏಕದಿನ ಪಂದ್ಯ ಆಡಿ 88 ರನ್ ಗಳಿಸಿದ್ದರು. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ದೇಶೀಯ ಕ್ರಿಕೆಟ್​ನಲ್ಲಿ 81 ಪಂದ್ಯ ಆಡಿ 4999 ರನ್ ಗಳಿಸಿದ್ದರು. ಅಜೇಯ 237ರನ್ ಗರಿಷ್ಠ ಗಳಿಕೆ. ಆಕ್ರಮಣಕಾರಿ ಎಡಗೈ ಬ್ಯಾಟ್ಸ್ ಮನ್ ಆಗಿದ್ದ ಚಂದ್ರಶೇಖರ್, ಇರಾನಿ ಕಪ್​ನಲ್ಲಿ ಶೇಷ ಭಾರತ ವಿರುದ್ಧ 56 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಗ್ರೇಗ್ ಚಾಪೆಲ್ ಭಾರತ ತಂಡದ ಕೋಚ್ ಆಗಿದ್ದಾಗ ರಾಷ್ಟ್ರೀಯ ಆಯ್ಕೆಗಾರರಾಗಿದ್ದ ಅವರು ಬಳಿಕ ದೇಶೀಯ ಟೂರ್ನಿಗಳ ವೀಕ್ಷಕ ವಿವರಣೆಕಾರರಾಗಿದ್ದರು.