ಆಂಧ್ರಪ್ರದೇಶ ರಾಜ್ಯ ಸರ್ಕಾರ : ನಿರುದ್ಯೋಗ ಭತ್ಯೆ ವಿತರಣೆಗೆ ಚಾಲನೆ

0
1168

ನಿರುದ್ಯೋಗಿ ಯುವಕ ರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿ ನಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರತಿ ತಿಂಗಳು ₹1,000 ನಿರುದ್ಯೋಗ ಭತ್ಯೆ ನೀಡುವ ‘ಮುಖ್ಯಮಂತ್ರಿ ಯುವ ನೇಸ್ತಂ’ ಯೋಜ ನೆಗೆ ಮುಖ್ಯಮಂತ್ರಿ ಎನ್‌.ಚಂದ್ರ ಬಾಬು ನಾಯ್ಡು ಚಾಲನೆ ನೀಡಿದರು.

ಹೈದರಾಬಾದ್‌: ನಿರುದ್ಯೋಗಿ ಯುವಕ ರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿ ನಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರತಿ ತಿಂಗಳು 1,000 ನಿರುದ್ಯೋಗ ಭತ್ಯೆ ನೀಡುವ ‘ಮುಖ್ಯಮಂತ್ರಿ ಯುವ ನೇಸ್ತಂ’ ಯೋಜ ನೆಗೆ ಮುಖ್ಯಮಂತ್ರಿ ಎನ್‌.ಚಂದ್ರ ಬಾಬು ನಾಯ್ಡು ಚಾಲನೆ ನೀಡಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಂದ ಬಂದಿರುವ ಪದವೀಧರ ನಿರುದ್ಯೋಗಿ ಯುವಕರಿ ಗೆ ಸೂಕ್ತ ಉದ್ಯೋಗ ದೊರಕುವವರೆಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಯೋಜನೆ ಕುರಿತು ಘೋಷಣೆ ಮಾಡಿತ್ತು.

ಸದ್ಯ 2.07 ಲಕ್ಷ ನಿರುದ್ಯೋಗಿ ಯುವಕರು ಹೆಸರನ್ನು ನೋಂದಾಯಿ ಸಿದ್ದಾರೆ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಭತ್ಯೆ ಸಂದಾಯ ವಾಗಲಿದೆ. ಮೊದಲನೇ ತಿಂಗಳಿನ ಭತ್ಯೆ ಬುಧವಾರ (ಅಕ್ಟೋಬರ್‌ 3ರಂದು)ಜಮೆ ಆಗಲಿದೆ.