ಆಂಧ್ರಕ್ಕೆ ಪ್ರತ್ಯೇಕ ಹೈಕೋರ್ಟ್‌: ಜ.1ರಿಂದ ಕಾರ್ಯಾರಂಭ

0
519

ತೆಲಂಗಾಣ ವಿಭಜನೆಯ ಬಳಿಕ ಪ್ರತ್ಯೇಕ ಹೈಕೋರ್ಟ್‌ ಹೊಂದುವ ಆಂಧ್ರ ಪ್ರದೇಶದ ಕನಸು ಕೊನೆಗೂ ಸಾಕಾರಗೊಂಡಿದೆ. ಆಂಧ್ರಕ್ಕೆ ಪ್ರತ್ಯೇಕ ಹೈಕೋರ್ಟ್‌ ಹೊಂದುವುದಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದ್ದು, ಜನವರಿ 1ರಿಂದ ಕಾರ್ಯಾರಂಭ ಮಾಡಲಿದೆ.

ಹೈದರಾಬಾದ್‌: ತೆಲಂಗಾಣ ವಿಭಜನೆಯ ಬಳಿಕ ಪ್ರತ್ಯೇಕ ಹೈಕೋರ್ಟ್‌ ಹೊಂದುವ ಆಂಧ್ರ ಪ್ರದೇಶದ ಕನಸು ಕೊನೆಗೂ ಸಾಕಾರಗೊಂಡಿದೆ. 

ಆಂಧ್ರಕ್ಕೆ ಪ್ರತ್ಯೇಕ ಹೈಕೋರ್ಟ್‌ ಹೊಂದುವುದಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದ್ದು, 2019 ಜನವರಿ 1ರಿಂದ ಕಾರ್ಯಾರಂಭ ಮಾಡಲಿದೆ. ಆಂಧ್ರದ ರಾಜಧಾನಿ ಅಮರಾವತಿ ನಿರ್ಮಾಣ ಪೂರ್ಣಗೊಳ್ಳುವವರೆಗೂ ಇದು ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದ್ದು, ದೇಶದ 25ನೇ ಹೈಕೋರ್ಟ್‌ ಆಗಿ ಗಮನ ಸೆಳೆಯಲಿದೆ. ಸದ್ಯ ಆಂಧ್ರ ಮತ್ತು ತೆಲಂಗಾಣಕ್ಕೆ ಒಂದೇ ಹೈಕೋರ್ಟ್‌ ಇದ್ದು ಅದು ಹೈದರಾಬಾದ್‌ನಲ್ಲಿದೆ. ಇದು ಮುಂದೆ ತೆಲಂಗಾಣ ಹೈಕೋರ್ಟ್‌ ಎಂದು ಗುರುತಿಸಿಕೊಳ್ಳಲಿದೆ.