ಆಂಗ್​ ಸಾನ್​ ಸೂಕಿ ಅವರ ಗೌರವ ಪೌರತ್ವ ಹಿಂಪಡೆದ ಕೆನಡಾ

0
605

ಮ್ಯಾನ್ಮಾರ್​ನ ಕೌನ್ಸಿಲರ್ ಆಂಗ್ ಸಾನ್ ಸೂ ಕಿ ಅವರಿಗೆ ನೀಡಿದ್ದ ಗೌರವ ಪೌರತ್ವವನ್ನು ಕೆನಡಾ ಸಂಸತ್ತು ಹಿಂಪಡೆದಿದೆ.

ಒಟ್ಟಾವಾ: ಮ್ಯಾನ್ಮಾರ್​ನ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರಿಗೆ ನೀಡಿದ್ದ ಗೌರವ ಪೌರತ್ವವನ್ನು ಕೆನಡಾ ಸಂಸತ್ತು ಹಿಂಪಡೆದಿದೆ.

2007ರಲ್ಲಿ ಸೂ ಕಿ ಅವರಿಗೆ ಕೆನಡಾ ಸರ್ಕಾರ ಗೌರವ ಪೌರತ್ವವನ್ನು ನೀಡಿತ್ತು. ಇದನ್ನು ಹಿಂಪಡೆಯುವ ನಿರ್ಣಯವನ್ನು ಕೆನಡಾ ಸಂಸತ್ತು ಒಮ್ಮತದಿಂದ ಅಂಗೀಕರಿಸಿದೆ. ಈ ಮೂಲಕ ಕೆನಡಾದ ಗೌರವ ಪೌರತ್ವವನ್ನು ಕಳೆದುಕೊಂಡ ಮೊದಲ ವ್ಯಕ್ತಿಯಾಗಿ ಆಂಗ್​ ಸಾನ್​ ಸೂ ಕಿ ಗುರುತಿಸಿಕೊಂಡಿದ್ದಾರೆ.

ಮ್ಯಾನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ಆಂಗ್​ ಸನ್​ ಸೂ ಕಿ ಅವರ ಗೌರವ ಪೌರತ್ವವನ್ನು ಹಿಂಪಡೆಯಬೇಕು ಎಂದು ಕೆನಡಾ ಸಂಸದೆ ರತ್ನಾ ಓಮಿದ್ವರ್​ ಅವರು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದರು. ಈ ನಿರ್ಣಯದ ಮೇಲೆ ಚರ್ಚೆ ನಡೆದು ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ವಿರೋಧವಿಲ್ಲದೆ ನಿರ್ಣಯಕ್ಕೆ ಅಂಗೀಕಾರ ದೊರೆತಿದೆ.

1991ರಲ್ಲಿ ನೊಬೆಲ್​ ಶಾಂತಿ ಪ್ರಶಸ್ತಿ ಪಡೆದಿರುವ ಸೂಕಿ ಅವರು ಒಂದು ಕಾಲದಲ್ಲಿ ಮಾನವ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇವರ ನೇತೃತ್ವದಲ್ಲಿ ಮ್ಯಾನ್ಮಾರ್​ನಲ್ಲಿ ಹೊಸ ಶಖೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ನರಮೇಧವನ್ನು ಅವರು ತಡೆಯುತ್ತಿಲ್ಲ. ತಮ್ಮ ದೇಶದಲ್ಲಿ ಯಾವುದೇ ದೌರ್ಜನ್ಯ ನಡೆಯುತ್ತಿಲ್ಲ ಎಂದು ತಿಳಿಸುತ್ತಿದ್ದು, ಸೇನೆಯ ನಿಲುವನ್ನು ಅವರು ಬೆಂಬಲಿಸುತ್ತಿದ್ದಾರೆ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ನೆರವು ನೀಡಲೂ ಅವರು ನಿರಾಕರಿಸುತ್ತಿದ್ದಾರೆ ಎಂದು ರತ್ನಾ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)