ಅಹಮದಾಬಾದ್ ಆಗಲಿದೆ ಕರ್ಣಾವತಿ : ಮರುನಾಮಕರಣಕ್ಕೆ ಮುಂದಾದ ಗುಜರಾತ್ ಸರಕಾರ

0
361

ಗುಜರಾತ್ ಸರಕಾರ ಕಾನೂನಾತ್ಮಕ ತೊಡಕುಗಳಿಲ್ಲದಿದ್ದರೆ ಅಹಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸುವುದಾಗಿ ಹೇಳಿದೆ.

ಅಹಮದಾಬಾದ್: ದೇಶದಲ್ಲಿ ಬಿಜೆಪಿ ಸರಕಾರ ಇರುವೆಡೆಯಲ್ಲೆಲ್ಲ ಪ್ರದೇಶಗಳ ಹೆಸರು ಬದಲಾವಣೆ ಪರ್ವ ಆರಂಭವಾದಂತಿದೆ. ಅಲಹಾಬಾದ್ ಹೆಸರು ಪ್ರಯಾಗ್ ರಾಜ್ ಎಂದು ಬದಲಾಯಿಸಿ ತಿಂಗಳಾಗುವಷ್ಟರಲ್ಲಿ ಯೋಗಿ ಆದಿತ್ಯನಾಥ್ ಫೈಜಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸುತ್ತಿರುವುದಾಗಿ ಘೋಷಿಸಿದ್ದರು (ಮಂಗಳವಾರ). ಇದರ ಬೆನ್ನಲ್ಲೇ ಗುಜರಾತ್ ಸರಕಾರ ಕಾನೂನಾತ್ಮಕ ತೊಡಕುಗಳಿಲ್ಲದಿದ್ದರೆ ಅಹಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸುವುದಾಗಿ ಹೇಳಿದೆ. 

ಅಹಮದಾಬಾದ್ ಹೆಸರನ್ನು ಕರ್ಣಾವತಿ ಎಂದು ಬದಲಿಸಬೇಕೆಂಬುದು ಜನರ ಆಶಯವಾಗಿದೆ. ಕಾನೂನು ತೊಡಕುಗಳು ಅಡ್ಡ ಬರದಿದ್ದರೆ, ನಾವು ಕೂಡ ಮರುನಾಮಕರಣಕ್ಕೆ ಸದಾ ಸಿದ್ಧ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ. 

ಕರ್ಣಾವತಿ ಅಹಮದಾಬಾದಿನ ಪ್ರಾಚೀನ ಹೆಸರು ಎಂದು ಹೇಳಲಾಗುತ್ತದೆ. 11ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಅಹಮದಾಬಾದ್ ನಗರ ಆಗ ಆಶಾವಲ್ ಹೆಸರಿನಿಂದ ಗುರುತಿಸಿಕೊಳ್ಳುತ್ತಿತ್ತು. ಚಾಲುಕ್ಯ ದೊರೆ ಕರ್ಣ ಎಂಬಾತ ಇಲ್ಲಿನ ರಾಜನ ಮೇಲೆ ದಾಳಿ ನಡೆಸಿ ಪ್ರದೇಶವನ್ನು ವಶಪಡಿಸಿಕೊಂಡು ಸಬರಮತಿ ನದಿ ದಡದಲ್ಲಿ ಕರ್ಣಾವತಿ ಹೆಸರಿನಲ್ಲಿ ನಗರ ನಿರ್ಮಿಸಿದ್ದ ಎಂದು ಇತಿಹಾಸ ಹೇಳುತ್ತದೆ. 

ಆದರೆ 1411ನೇ ಸುಲ್ತಾನ್ ಅಹ್ಮದ್ ಶಾಹ್, ಕರ್ಣಾವತಿಯನ್ನು ಅಹಮದಾಬಾದ್ ಎಂದು ಕರೆದಿದ್ದರು.