ಅಸ್ಸಾಂ ರಾಜ್ಯ: ಗುಟ್ಕಾ, ಪಾನ್‌ ನಿಷೇಧ

0
8

ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷದ ಅವಧಿಗೆ ತಂಬಾಕು ವಸ್ತುಗಳ ಮಾರಾಟ, ತಯಾರಿಕೆ, ಸಂಗ್ರಹ, ವಿತರಣೆ, ತಂಬಾಕು ಹಾಗೂ ನಿಕೋಟಿನ್‌ ಹೊಂದಿರುವ ಗುಟ್ಕಾ, ಪಾನ್‌ ಮಸಾಲಾಗಳ ಜಾಹೀರಾತುಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದೆ.

ಗುವಾಹಟಿ: ಅಸ್ಸಾಂ ಅನ್ನು ತಂಬಾಕು ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಅಲ್ಲಿಯ ರಾಜ್ಯ ಸರಕಾರ ನವೆಂಬರ್ 27 ರ ಬುಧವಾರ ತಂಬಾಕು ವಸ್ತುಗಳ ಮಾರಾಟ, ತಯಾರಿಕೆ, ಸಂಗ್ರಹ, ವಿತರಣೆ, ತಂಬಾಕು ಹಾಗೂ ನಿಕೋಟಿನ್‌ ಹೊಂದಿರುವ ಗುಟ್ಕಾ, ಪಾನ್‌ ಮಸಾಲಾಗಳ ಜಾಹೀರಾತುಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿದೆ.

ಆಹಾರ ಸುರಕ್ಷತೆ ಮತ್ತು ಭದ್ರತಾ ಕಾಯ್ದೆ 2006 ರ ಸೆಕ್ಷನ್ 30 ರ ಉಪವಿಭಾಗ 2 ರ ಷರತ್ತು (ಎ) ಅಡಿಯಲ್ಲಿ ಅಸ್ಸಾಂ ಸರ್ಕಾರ ರಾಜ್ಯದಲ್ಲಿ ಒಂದು ವರ್ಷದ ಅವಧಿಗೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ, ಪ್ಯಾನ್ ಮಸಾಲ ಮತ್ತು ಚೂಯಿಂಗ್ ವಸ್ತುಗಳನ್ನು ನಿಷೇಧಿಸಿದೆ.

ಅಸ್ಸಾಂ ಸರ್ಕಾರದ ಆಹಾರ ಸುರಕ್ಷತಾ ಆಯುಕ್ತ ಡಾ.ಚಂದ್ರಮಾ ಬರುವಾ ಅವರು ನೀಡಿದ ಅಧಿಕೃತ ಅಧಿಸೂಚನೆಯ ಪ್ರಕಾರ, 2011 ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟದ ಮೇಲಿನ ನಿಷೇಧಗಳು ಮತ್ತು ನಿರ್ಬಂಧಗಳು) ಕಾಯ್ದೆಯ  2, 3 ಮತ್ತು 4 ರ ನಿಯಮಗಳ ಅಡಿಯಲ್ಲಿ ನಿಷೇಧವನ್ನು ಮಾಡಲಾಗಿದೆ.

ಕಳೆದ ವಾರ ನವೆಂಬರ್ 22 ರಂದು ಅಧಿಸೂಚನೆ ಹೊರಡಿಸಲಾಗಿದೆ. ತಂಬಾಕು ಸೇವಿಸುವುದರಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿರುವ ಅಪಾಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮೊದಲು 2013 ರಲ್ಲಿ ಅಸ್ಸಾಂ ಸರ್ಕಾರ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪ್ಯಾನ್ ಮಸಾಲಾ ತಯಾರಿಕೆ ಮತ್ತು ವಿತರಣೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿತ್ತು.