ಅಸ್ಸಾಂ ಪೌರ ನೋಂದಣಿಯ ಅಂತಿಮ ಕರಡು ಬಿಡುಗಡೆ

0
24

ಬಹುನಿರೀಕ್ಷಿತ ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್​ಆರ್​ಸಿ)ಯ ಎರಡನೆಯ ಮತ್ತು ಅಂತಿಮ ಕರಡು ಜುಲೈ 30 ರ ಸೋಮವಾರ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಒಟ್ಟು 2.9 ಕೋಟಿ ಜನರ ಹೆಸರಿದ್ದು, 40.07 ಕೋಟಿ ಜನರ ಹೆಸರನ್ನು ಸೇರಿಸಲಾಗಿಲ್ಲ.

ಗುವಾಹತಿ: ಬಹುನಿರೀಕ್ಷಿತ ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್​ಆರ್​ಸಿ)ಯ ಎರಡನೆಯ ಮತ್ತು ಅಂತಿಮ ಕರಡು ಜುಲೈ 30 ರ ಸೋಮವಾರ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಒಟ್ಟು 2.9 ಕೋಟಿ ಜನರ ಹೆಸರಿದ್ದು, 40.07 ಕೋಟಿ ಜನರ ಹೆಸರನ್ನು ಸೇರಿಸಲಾಗಿಲ್ಲ.

ಎನ್​ಆರ್​ಸಿಯಲ್ಲಿ ಪೌರತ್ವ ನೋಂದಣಿಗೆ ಸಲ್ಲಿಕೆಯಾಗಿದ್ದ 3.29 ಕೋಟಿ ಅರ್ಜಿಗಳ ಪೈಕಿ 2.9 ಕೋಟಿ ಜನರ ಹೆಸರು ಅಂತಿಮ ಕರಡಿನಲ್ಲಿದೆ. 2017ರ ಡಿಸೆಂಬರ್​ 31ರ ರಾತ್ರಿ ಮತ್ತು 2018ರ ಜನವರಿ 1 ರಂದು ಅಸ್ಸಾಂನ ಎನ್​ಆರ್​ಸಿ ಮೊದಲ ಕರಡು ಬಿಡುಗೆಯಾಗಿತ್ತು. ಅದರಲ್ಲಿ 1.9 ಕೋಟಿ ಜನರ ಹೆಸರಿತ್ತು. ಈ ಸಂದರ್ಭದಲ್ಲಿ ಇನ್ನೂ ಶೇ. 40 ಅರ್ಜಿಗಳು ವಿಚಾರಣೆ ಹಂತದಲ್ಲಿವೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಶೈಲೇಶ್ ತಿಳಿಸಿದ್ದರು.

ಅಸ್ಸಾಂ ಇತಿಹಾಸದಲ್ಲಿ ಇಂದಿನ ದಿನ ಐತಿಹಾಸಿಕವಾದುದು. ಸುಪ್ರೀಂ ಕೋರ್ಟ್​ ನಿರ್ದೇಶನದಂತೆ ಕಾನೂನು ಬದ್ಧವಾಗಿ ಎನ್​ಸಿಆರ್​ನಲ್ಲಿ ಪೌರತ್ವ ನೋಂದಣೆ ಪ್ರಕ್ರಿಯೆ ನಡೆಸಲಾಗಿದೆ. ಅಂತಿಮ ಕರಡಿನ ಕುರಿತು ಆಕ್ಷೇಪಣೆ ಸಲ್ಲಿಸಲು ಮತ್ತು ತಮ್ಮ ಹೆಸರು ಬಿಟ್ಟು ಹೋಗಿರುವ ಕುರಿತು ಮನವಿ ಸಲ್ಲಿಸಲು ಆಗಸ್ಟ್​ 30 ರಿಂದ ಸೆಪ್ಟೆಂಬರ್​ 28ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಶೈಲೇಶ್​ ತಿಳಿಸಿದ್ದಾರೆ.

ಬಿಗಿ ಭದ್ರತೆ

ಎನ್​ಆರ್​ಸಿಯ ಅಂತಿಮ ಕರಡು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್​, ಅರುಣಾಚಲ ಪ್ರದೇಶ, ಮಣಿಪುರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ 23 ಸಾವಿರ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಿದೆ. (ಏಜೆನ್ಸೀಸ್​)