ಅಸ್ಸಾಂ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸ ಇಲ್ಲ

0
54

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಸರ್ಕಾರಿ ಕೆಲಸ ನೀಡಬಾರದು ಎಂಬ ನಿರ್ಧಾರವನ್ನು ಅಸ್ಸಾಂ ಸರ್ಕಾರದ ಸಚಿವ ಸಂಪುಟ ಕೈಗೊಂಡಿದೆ.

ಗುವಾಹಟಿ: ಎರಡಕ್ಕಿಂತ  ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಸರ್ಕಾರಿ ಕೆಲಸ ನೀಡಬಾರದು ಎಂಬ ನಿರ್ಧಾರವನ್ನು ಅಸ್ಸಾಂ ಸರ್ಕಾರದ ಸಚಿವ ಸಂಪುಟ ಕೈಗೊಂಡಿದೆ.

ಅಕ್ಟೋಬರ್ 21 ರ ಸೋಮವಾರ ಸಂಜೆ ಈ ರೀತಿ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ ಜನೇವರಿ 1, 2021 ರಿಂದ ಇದನ್ನು ಅನುಷ್ಟಾನಕ್ಕೆ ತರಲಿದೆ. ಅದೇ ವೇಳೆ ಹೊಸ ಭೂ ನಿಯಮವನ್ನು ಜಾರಿ ಮಾಡಿದೆ. ಇದರ ಪ್ರಕಾರ ಜಮೀನು ಇಲ್ಲದಿರುವವರಿಗೆ ಮೂರು ಬಿಘಾ ಜಮೀನು ಮತ್ತು ಮನೆ ನಿರ್ಮಾಣಕ್ಕಾಗಿ ಅರ್ಧ ಬಿಘಾ ಭೂಮಿ ನೀಡಲಾಗುವುದು ( ಅಸ್ಸಾಂ ನಲ್ಲಿ 1  ಬಿಘಾ  = 16 ಗುಂಟೆ ಜಮೀನು)

ಸಣ್ಣ ಕುಟುಂಬಗಳಿಗೆ ಮಾತ್ರ ಸರ್ಕಾರಿ ಕೆಲಸ ನೀಡಲಾಗುವುದು ಎರಡಕ್ಕಿಂತ ಹೆಚ್ಚು ಮಕ್ಕಳು ಇದ್ದರೆ ಅವರಿಗೆ ಸರ್ಕಾರಿ ಕೆಲಸ ನೀಡಲಾಗುವುದಿಲ್ಲ. ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಕಚೇರಿ ಹೇಳಿದೆ.

2017 ರ ಸೆಪ್ಟೆಂಬರ್ ನಲ್ಲಿ ಅಸ್ಸಾಂ ವಿಧಾನಸಭೆಯ ಜನಸಂಖ್ಯೆ ಮತ್ತು ಮಹಿಳಾ ಅಭಿವೃದ್ಧಿ ನೀತಿಗೆ ಅಂಗೀಕಾರ ನೀಡಿತ್ತು. ಇದರ ಪ್ರಕಾರ ಎರಡು ಮಕ್ಕಳನ್ನು ಹೊಂದಿದವರು ಮಾತ್ರ ಸರ್ಕಾರಿ ಕೆಲಸಕ್ಕೆ ಅರ್ಹರಾಗಿರುತ್ತಾರೆ. ಅದೇ ವೇಳೆ ಈಗಾಗಲೇ ಸರ್ಕಾರಿ ಉದ್ಯೋಗ ಹೊಂದಿರುವವರು ಕೂಡಾ ಎರಡು ಮಕ್ಕಳ ಕುಟುಂಬ ನೀತಿಯನ್ನು ಪಾಲಿಸಬೇಕಾಗುತ್ತದೆ.

ರಾಜ್ಯದಲ್ಲಿ 25% ಬಸ್ ದರವನ್ನು ಹೆಚ್ಚಳ ಮಾಡುವುದರ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.