‘ಅಲ್ಟಿಮಾ ಥುಲೆ’ಯಲ್ಲಿ ನೀರಿನ ಸಾಕ್ಷ್ಯಾಧಾರ : ನಾಸಾ

0
24

: ಕ್ಯುಪರ್‌ ಬೆಲ್ಟ್‌ನ ‘2014ಎಂಯು69’ನಲ್ಲಿ ಮೆಥನಾಲ್‌, ನೀರಿನ ಮಂಜುಗಡ್ಡೆ ಇರುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ನಾಸಾ ತಿಳಿಸಿದೆ.

ವಾಷಿಂಗ್ಟನ್‌ (ಪಿಟಿಐ): ಕ್ಯುಪರ್‌ ಬೆಲ್ಟ್‌ನ ‘2014ಎಂಯು69‘ನಲ್ಲಿ ಮೆಥನಾಲ್‌, ನೀರಿನ ಮಂಜುಗಡ್ಡೆ ಇರುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ನಾಸಾ ತಿಳಿಸಿದೆ.

2014ಎಂಯು69‘ ಅನ್ನು ‘ಅಲ್ಟಿಮಾ ಥುಲೆ’ ಎನ್ನುವ ಅಡ್ಡ ಹೆಸರಿನಲ್ಲಿಯೂ ಕರೆಯಲಾಗುತ್ತಿದೆ. ಸೌರಮಂಡಲದಲ್ಲಿರುವ ಎಂಟು ಪ್ರಮುಖ ಗ್ರಹಗಳ ಆಚೆಗೆ ಇರುವ ಜಾಗವೇ ಕ್ಯುಪರ್ ಬೆಲ್ಟ್.

‘ಅಲ್ಟಿಮಾ ಥುಲೆ’ಯ ಮೇಲ್ಮೈ ಲಕ್ಷಣಗಳ ಬಗ್ಗೆಯೂ ಸಂಶೋಧಕರು ಅಧ್ಯಯನ ಕೈಗೊಂಡಿದ್ದಾರೆ. ಬೆಟ್ಟಗಳು, ಗುಂಡಿಗಳು, ಹೊಳೆಯುವ ವಸ್ತುಗಳು ಮುಂತಾದ ವಿಶೇಷತೆಗಳನ್ನು ಪತ್ತೆ ಮಾಡಲಾಗುತ್ತಿದೆ. ಬಣ್ಣ ಮತ್ತು ಸಂಯೋಜನೆಯಲ್ಲಿ ‘ಅಲ್ಟಿಮಾ ಥುಲೆ’ ಹಲವು ವಸ್ತುಗಳನ್ನು 
ಹೋಲುತ್ತದೆ. 

ಕ್ಯುಪರ್‌ ಬೆಲ್ಟರ್‌ನ ಸಣ್ಣ ಕುಳಿಗಳು ಸೃಷ್ಟಿಯಾಗಿರುವ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ. ಬಾಹ್ಯಾಕಾಶದಲ್ಲಿ ವಸ್ತುಗಳು ಬೀಳುವಾಗ ಅಥವಾ ಘನವಸ್ತುವಿನಿಂದ ಅನಿಲವಾಗಿ ಪರಿವರ್ತನೆಯಾಗುವ ಸಂದರ್ಭದಲ್ಲಿ ಕುಳಿಗಳು ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.