ಅಮೇರಿಕಾದ ಆರ್ಥಿಕ ರಾಯಭಾರಿ ಹುದ್ದೆಗೆ ಭಾರತ ಮೂಲದ ಮನೀಷಾ ಸಿಂಗ್ ನೇಮಕ

0
20

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಮನೀಷಾ ಸಿಂಗ್ ಅವರನ್ನು ಆರ್ಥಿಕ ರಾಯಭಾರಿ ಹುದ್ದೆಯ ಉಸ್ತುವಾರಿಯಾಗಿ ನೇಮಕ ಮಾಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ಹೊರಡಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಭಾರತ ಸಂಜಾತ ವಕೀಲೆ ಮನೀಷಾ ಸಿಂಗ್ ಅವರನ್ನು ಆರ್ಥಿಕ ರಾಯಭಾರಿ ಹುದ್ದೆಯ ಉಸ್ತುವಾರಿಯಾಗಿ ನೇಮಕ ಮಾಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಿಸಿದ ಮನೀಷಾ ಸಿಂಗ್ ಅವರು ಬಾಲ್ಯದಲ್ಲಿಯೇ ತಮ್ಮ ಪೋಷಕರೊಂದಿಗೆ ಫ್ಲಾರಿಡಾಗೆ ತೆರಳಿದ್ದರು. ಪ್ರಸ್ತುತ ಸೆನೆಟರ್ ಡಾನ್ ಸಲೈವನ್ ಅವರ ಸಲಹೆಗಾರರಾಗಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ.

ಟ್ರಂಪ್ ಅವರು ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆರ್ಥಿಕ ರಾಯಭಾರಿಯಾಗಿದ್ದ ಚಾರ್ಲ್ಸ್ ರಿವ್‌ಕಿನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆಗಿನಿಂದ ಈ ಹುದ್ದೆ ಖಾಲಿ ಇತ್ತು.