ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ.ಬುಷ್​ ನಿಧನ

0
691

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ. ಬುಷ್​ ಅವರು ತಮ್ಮ 94ನೇ ವಯಸ್ಸಿನಲ್ಲಿ 2018 ರ ನವೆಂಬರ್ 30 ರಂದು ಮೃತಪಟ್ಟಿದ್ದಾರೆ.

ವಾಷಿಂಗ್ಟನ್​:ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್​ ಎಚ್​.ಡಬ್ಲ್ಯೂ. ಬುಷ್​ ಅವರು ತಮ್ಮ 94ನೇ ವಯಸ್ಸಿನಲ್ಲಿ 2018 ರ ನವೆಂಬರ್ 30 ರಂದು ಮೃತಪಟ್ಟಿದ್ದಾರೆ.

ಅಮೆರಿಕದ 41ನೇ ಅಧ್ಯಕ್ಷರಾಗಿ 1989ರಿಂದ 1993ರವರೆಗೆ ಆಡಳಿತ ನಡೆಸಿದ್ದಾರೆ. ಎಚ್​.ಡಬ್ಲ್ಯೂ.ಬುಷ್​​ ಅವರ ನಿಧನದ ಬಗ್ಗೆ ಅವರ ಪುತ್ರ, ಯುಎಸ್​ ನ ಮಾಜಿ ಅಧ್ಯಕ್ಷ ಜಾರ್ಜ್​ ಡಬ್ಲ್ಯೂ. ಬುಷ್ ಅವರು ಟ್ವೀಟ್​ ಮಾಡಿ ನಮ್ಮ ತಂದೆ ಮೃತಪಟ್ಟಿದ್ದು ನನಗೆ ಹಾಗೂ ನನ್ನ ಸಹೋದರ, ಸಹೋದರಿಯರಿಗೆ ತುಂಬ ದುಃಖ ತಂದಿದೆ ಎಂದು ಹೇಳಿದ್ದಾರೆ.

ಈ ವರ್ಷದ ಏಪ್ರಿಲ್​ನಲ್ಲಿ ಬುಷ್​ ಅವರ ಪತ್ನಿ ಬಾರ್ಬರಾ ಮೃತಪಟ್ಟಿದ್ದರು. ತಮ್ಮ ಪತ್ನಿಯನ್ನು ತುಂಬ ಪ್ರೀತಿಸುತ್ತಿದ್ದ ಬುಷ್​ ಹೆಂಡತಿಯ ನಿಧನದ ಒಂದೇ ವಾರದಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ​ ಐದು ಮಕ್ಕಳು, 17 ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು.

ಅಮೆರಿಕ-ರಷ್ಯಾ ಶೀತಲ ಸಮರದ ಸಂದರ್ಭದಲ್ಲಿ ದೇಶವನ್ನು ವ್ಯವಸ್ಥಿತವಾಗಿ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1991ರ ಗಲ್ಫ್​ ಯುದ್ಧದಲ್ಲೂ ಯುಎಸ್​ ಯಶಸ್ಸು ಕಾಣಲು ಬುಷ್​​ ಕಾರಣ. ಅಲ್ಲದೆ ಎರಡನೇ ಮಹಾಯುದ್ಧದ ಹಿರೋ ಎಂದೇ ಕರೆಯಲ್ಪಡುತ್ತಿದ್ದರು.

ನಂತರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಷ್​ ಸೋಲು ಅನುಭವಿಸಿ ಬಿಲ್​ ಕ್ಲಿಂಟನ್​ ಅಧ್ಯಕ್ಷರಾದರು. ಕ್ಲಿಂಟನ್​ ಅವಧಿ ಮುಗಿದ ಬಳಿಕ 43ನೇ ಅಧ್ಯಕ್ಷರಾಗಿ ಜಾರ್ಜ್​ ಎಚ್​.ಡಬ್ಲ್ಯೂ.ಬುಷ್​ ಪುತ್ರ ಜಾರ್ಜ್​ ಡಬ್ಲ್ಯೂ ಬುಷ್​ ಆಯ್ಕೆಯಾಗಿದ್ದು ವಿಶೇಷ.