ಅಮೆರಿಕ ನಿರ್ಬಂಧ ನಂತರ ಇರಾನ್‌ ತೈಲಕ್ಕೆ ರೂಪಾಯಿಯಲ್ಲೇ ಭಾರತ ಪಾವತಿ

0
645

ಇರಾನ್‌ನಿಂದ ಭಾರತದ ತೈಲಾಗಾರಕ್ಕೆ ಕಚ್ಛಾತೈಲ ಆಮದಾಗುತ್ತಿದ್ದು, ಅದಕ್ಕೆ ಇನ್ನು ಮುಂದೆ ರೂಪಾಯಿಯಲ್ಲಿ ಭಾರತ ಪಾವತಿ ಮಾಡಲಿದೆ ಎನ್ನಲಾಗಿದೆ.

ಹೊಸದಿಲ್ಲಿ: ಇರಾನ್‌ನಿಂದ ಭಾರತದ ತೈಲಾಗಾರಕ್ಕೆ ಕಚ್ಛಾತೈಲ ಆಮದಾಗುತ್ತಿದ್ದು, ಅದಕ್ಕೆ ಇನ್ನು ಮುಂದೆ ರೂಪಾಯಿಯಲ್ಲಿ ಭಾರತ ಪಾವತಿ ಮಾಡಲಿದೆ ಎನ್ನಲಾಗಿದೆ. 

ಪ್ರಸ್ತುತ ವ್ಯವಸ್ಥೆಯಲ್ಲಿ ಭಾರತ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜರ್ಮನಿ ಮೂಲದ ಯುರೋಪಿಚ್-ಇರಾನಿಸ್ ಹ್ಯಾಂಡಲ್ಸ್‌ಬ್ಯಾಂಕ್‌ ಎಜಿ ಮೂಲಕ ಯೂರೋದಲ್ಲಿ ಪಾವತಿ ಮಾಡುತ್ತಿದೆ. ಆದರೆ ನವೆಂಬರ್ ತಿಂಗಳಿನಿಂದ ಭಾರತ ದೇಶೀಯ ಪಾವತಿ ವ್ಯವಸ್ಥೆ ಮೂಲಕ ಯುಕೋ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್‌ನಿಂದ ಇರಾನ್‌ಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ. 

ಎಸ್‌ಬಿಐ ನವೆಂಬರ್‌ನಿಂದ ಭಾರತಕ್ಕೆ ತೈಲ ಪೂರೈಸುವ ಇರಾನ್‌ ರಿಫೈನರಿಗಳಿಗೆ ಪಾವತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. 
ಅಮೆರಿಕ ಒಪ್ಪಂದ ಮತ್ತು ನಿರ್ಬಂಧದಿಂದಾಗಿ ಇರಾನ್‌ ಜತೆಗೆ ವಾಣಿಜ್ಯ, ವ್ಯಾಪಾರಕ್ಕೆ ಯೂರೋ ಬಳಕೆ ಕಷ್ಟಕರವಾಗುತ್ತಿದ್ದು, ಹೀಗಾಗಿ ಅದನ್ನು ಬಿಟ್ಟು, ರೂಪಾಯಿ ವ್ಯವಸ್ಥೆಯಲ್ಲಿಯೇ ಪಾವತಿಸಲು ಭಾರತ ಮುಂದಾಗಿದೆ. 

ಮೂಲಗಳ ಪ್ರಕಾರ ಇರಾನ್‌ನ ಕೆಲವೊಂದು ಕಾರ್ಗೋಗಳಿಗೆ ರೂಪಾಯಿಯಲ್ಲೇ ಪಾವತಿಯಾಗಿದೆ ಎನ್ನಲಾಗಿದೆ. ಮೊದಲು ಭಾರತ ರೂಪಾಯಿಯಲ್ಲೇ ಇರಾನ್‌ಗೆ ಪಾವತಿ ಮಾಡುತ್ತಿದ್ದು, ಆದರೆ ನಂತರದಲ್ಲಿ ಯೂರೋಗೆ ಬದಲಾಗಿತ್ತು. ಚೀನಾ ಬಳಿಕ ಇರಾನ್‌ನಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರ ಭಾರತವಾಗಿದೆ.