ಅಮೆರಿಕ ಎಚ್1-ಬಿ ವೀಸಾ ನಿಯಮ ಬಿಗಿ

0
340

ಎಚ್-1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಟ್ರಂಪ್ ಆಡಳಿತ ಆದೇಶ ಹೊರಡಿಸಿದೆ. ಎಲ್ಲ ಅಮೆರಿಕ ಕಂಪನಿಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಪ್ರಜೆಯ ಸಂಪೂರ್ಣ ವಿವರವನ್ನು ಎಚ್-1ಬಿ ವೀಸಾ ಕಾರ್ವಿುಕ ಅರ್ಜಿ ಪ್ರಕ್ರಿಯೆ ವೇಳೆ ಬಹಿರಂಗಗೊಳಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ವೀಸಾ ಪ್ರಾಯೋಜಕತ್ವ ಒದಗಿಸುವುದು ಅಮೆರಿಕ ಮೂಲದ ಕಂಪನಿಗಳಿಗೆ ಕಷ್ಟಸಾಧ್ಯವಾಗಲಿದೆ.

ನ್ಯೂಯಾರ್ಕ್: ಎಚ್-1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ ಟ್ರಂಪ್ ಆಡಳಿತ ಆದೇಶ ಹೊರಡಿಸಿದೆ. ಎಲ್ಲ ಅಮೆರಿಕ ಕಂಪನಿಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಪ್ರಜೆಯ ಸಂಪೂರ್ಣ ವಿವರವನ್ನು ಎಚ್-1ಬಿ ವೀಸಾ ಕಾರ್ವಿುಕ ಅರ್ಜಿ ಪ್ರಕ್ರಿಯೆ ವೇಳೆ ಬಹಿರಂಗಗೊಳಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ವಿದೇಶಿ ಉದ್ಯೋಗಿಗಳಿಗೆ ಎಚ್-1ಬಿ ವೀಸಾ ಪ್ರಾಯೋಜಕತ್ವ ಒದಗಿಸುವುದು ಅಮೆರಿಕ ಮೂಲದ ಕಂಪನಿಗಳಿಗೆ ಕಷ್ಟಸಾಧ್ಯವಾಗಲಿದೆ. ಎಚ್1-ಬಿ ಅರ್ಜಿಗೆ ಅಮೆರಿಕದ ಕಾರ್ವಿುಕ ಇಲಾಖೆಯಿಂದ ನಿರಾಕ್ಷೇಪಣ ಆದೇಶ ಪಡೆಯುವುದು ನೂತನ ನಿಯಮದ ಅನ್ವಯ ಕಡ್ಡಾಯವಾಗಿದೆ.

ವಿದೇಶಿ ಉದ್ಯೋಗಿ ಅಮೆರಿಕ ಪ್ರವೇಶಿಸುವುದರಿಂದ ಅಲ್ಲಿನ ಪ್ರಜೆ ಕೆಲಸ ಕಳೆದುಕೊಳ್ಳುವುದಿಲ್ಲ ಎಂದು ಕಾರ್ವಿುಕ ಇಲಾಖೆ ಖಾತ್ರಿಪಡಿಸಿಕೊಳ್ಳಬೇಕಿದೆ. ಕಂಪನಿಯಲ್ಲಿನ ಅಲ್ಪಾವಧಿ ನೌಕರರು, ಎಚ್-ಬಿ ವೀಸಾ ನೌಕರರು, ಕಾಯಂ ನೌಕರರು, ಗುತ್ತಿಗೆ ನೌಕರರ ಪೂರ್ಣ ವಿವರ ಇಲಾಖೆಗೆ ಸಲ್ಲಿಸಬೇಕು.

ಅಮೆರಿಕನ್ ಫಸ್ಟ್ ಎಂಬ ಘೋಷವಾಕ್ಯದಿಂದ ಅಮೆರಿಕದ ಮೂಲನಿವಾಸಿಗಳ ಉದ್ಯೋಗ ರಕ್ಷಿಸುವುದಾಗಿ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು. ಹೀಗಾಗಿ ಎಚ್1-ಬಿ ವೀಸಾ ನಿಯಮಗಳನ್ನು 2017ರಿಂದಲೂ ಟ್ರಂಪ್ ಸರ್ಕಾರ ಬಿಗಿ ಮಾಡುತ್ತಲೇ ಬಂದಿದೆ.