ಅಮೆರಿಕಾ ವಿದೇಶಾಂಗ ಸಚಿವ ಸ್ಥಾನದಿಂದ ರೆಕ್ಸ್ ಟಿಲ್ಲರ್‌ಸನ್‌ ಔಟ್

0
17

ಪ್ರಮುಖ ಬೆಳವಣಿಗೆಯೊಂದರಲ್ಲಿ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ಸನ್‌ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಂಪುಟದಿಂದ ಕೈಬಿಟ್ಟಿದ್ದಾರೆ.

ರೆಕ್ಸ್‌ ಬದಲಿಗೆ ಸಿಐಎ ನಿರ್ದೇಶಕ ಮೈಕ್‌ ಪೊಂಪಿಯೊ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ತಮ್ಮ ನಿರ್ಧಾರವನ್ನು ಅಧ್ಯಕ್ಷ ಟ್ರಂಪ್ ಮಂಗಳವಾರ ಮುಂಜಾನೆ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. 
 
ಇನ್ನು ಪೊಂಪಿಯೊ  ಅವರ ಸ್ಥಾನಕ್ಕೆ ಗೀನಾ ಹಾಸ್ಪೆಲ್ ಅವರನ್ನು ನೇಮಕ ಮಾಡಲಾಗಿದ್ದು ಗೀನಾ ಈ ಹುದ್ದೆ ನಿರ್ವಹಿಸುತ್ತಿರುವ ಮೊದಲ ಮಹಿಳೆಯಾಗಲಿದ್ದಾರೆ.
 
“ಸಿಐಎ ನಿರ್ದೇಶಕ ಮೈಕ್‌ ಪೊಂಪಿಯೊ ನಮ್ಮ ಹೊಸ ರಾಜ್ಯ ಕಾರ್ಯದರ್ಶಿ ಆಗಿದ್ದಾರೆ. ಅವರು ಅದ್ಭುತ ಕೆಲಸ ಮಾಡುತ್ತಾರೆ!” ಟ್ರಂಪ್ ಟ್ವೀಟ್ ಮಾಡಿದ್ದಾರೆ.
 
“ತಮ್ಮ ಅಮೂಲ್ಯ ಸೇವೆಗಾಗಿ ರೆಕ್ಸ್‌ ಟಿಲ್ಲರ್‌ಸನ್‌ ಅವರಿಗೆ ಧನ್ಯವಾದಗಳು” ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
 
ಟ್ರಂಪ್ ಘೋಷಣೆಗೆ ಕೆಲವೇ ಗಂಟೆಗಳ ಮುನ್ನ ಟಿಲ್ಲರ್‌ಸನ್‌ ತಮ್ಮ ನಿಗದಿತ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ್ದರು. ಸಂಪುಟ ಸಹೋದ್ಯೋಗಿಯ ಬದಲಾವಣೆಗೆ ಅಧ್ಯಕ್ಷರು ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.