ಅಮೆರಿಕಾದ ಸಿಐಎ ಗೆ ಮೊದಲ ಮಹಿಳಾ ನಿರ್ದೇಶಕಿ “ಜಿನಾ ಹಾಸ್ಪೆಲ್”

0
17

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ನಿರ್ದೇಶಕರಾಗಿ 61ರ ಹರೆಯದ ಜಿನಾ ಹಾಸ್ಪೆಲ್‌ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ನಿರ್ದೇಶಕರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ

ವಾಷಿಂಗ್ಟನ್‌ : ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ನಿರ್ದೇಶಕರಾಗಿ 61ರ ಹರೆಯದ ಜಿನಾ ಹಾಸ್ಪೆಲ್‌ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ನಿರ್ದೇಶಕರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಗೂಢಚಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸ್ಪೆಲ್‌, 2001ರ ಸೆಪ್ಟೆಂಬರ್‌ 11ರಂದು ವಿಶ್ವ ವಾಣಿಜ್ಯ ಸಂಸ್ಥೆ ಅವಳಿ ಕಟ್ಟಡಗಳ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಪ್ರಕರಣದ ವಿಚಾರಣಾ ನಡೆಸುವಾಗ ವಿವಾದಾತ್ಮಕ ತಂತ್ರಗಳನ್ನು ಅನುಸರಿಸಿದ್ದರೆಂದು ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ಗಳು ಮತ್ತು ಮಾನವ ಹಕ್ಕು ರಕ್ಷಣಾ ಸಂಘಟನೆಗಳು ಆಪಾದಿಸಿದ್ದವು.

ಇದರ ನಡುವೆಯೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಿಐಎ ನಿರ್ದೇಶಕರ ಸ್ಥಾನಕ್ಕೆ ಹಾಸ್ಪೆಲ್‌ ಅವರನ್ನು ನಾಮನಿರ್ದೇಶ ಮಾಡಿದ್ದನ್ನು 6 ಮಂದಿ ಸೆನೆಟ್ ಸದಸ್ಯರು ಬೆಂಬಲಿಸಿದ್ದರು. ಇವರ ನೇಮಕಕ್ಕೆ ಸೆನೆಟ್‌ನಲ್ಲಿ 54 ಮತಗಳ ಪೈಕಿ 45 ಮತಗಳು ಪರವಾಗಿ ಚಲಾವಣೆಯಾಗಿವೆ.