ಅಮೆರಿಕದ ವಿಲಿಯಂ ನೋರ್ಡಾಸ್, ಪಾಲ್‌ ರೋಮರ್‌ಗೆ 2018 ನೇ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಗೆ ಆಯ್ಕೆ

0
641

ಅಮೆರಿಕಾದ ಅರ್ಥಶಾಸ್ತ್ರಜ್ಞರಾದ ವಿಲಿಯಮ್​ ನೋರ್ಡಾಸ್​ ಮತ್ತು ಪಾಲ್​ ರೋಮರ್​ ಅವರಿಗೆ 2018ನೇ ಸಾಲಿನ ನೊಬೆಲ್​ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ.

ಸ್ಟಾಕ್‌ಹೋಮ್‌: ಅಮೆರಿಕಾದ ಅರ್ಥಶಾಸ್ತ್ರಜ್ಞರಾದ ವಿಲಿಯಮ್​ ನೋರ್ಡಾಸ್​ ಮತ್ತು ಪಾಲ್​ ರೋಮರ್​ ಅವರಿಗೆ 2018ನೇ ಸಾಲಿನ ನೊಬೆಲ್​ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ.

ಜಾಗತಿಕ ತಾಪಮಾನ ಏರಿಕೆ ಹಾಗೂ ಸೂಕ್ಷ್ಮಅರ್ಥಶಾಸ್ತ್ರದಲ್ಲಿನ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಈ ಬಾರಿಯ ಅರ್ಥಶಾಸ್ತ್ರ ನೊಬೆಲ್​ ಪ್ರಶಸ್ತಿ ನೀಡಲಾಗುತ್ತಿದೆ.ಎಂದು ನೊಬೆಲ್​ ಪ್ರಶಸ್ತಿ ನೀಡುವ ‘ರಾಯಲ್​ ಸ್ವೀಡಿಷ್​ ಅಕಾಡೆಮಿ ಆಫ್​ ಸೈನ್ಸಸ್​’ ಪ್ರಕಟಿಸಿದೆ.

ಈ ಇಬ್ಬರ ಸಂಶೋಧನೆಗಳು, ಅರ್ಥಶಾಸ್ತ್ರ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸಿವೆ. ಅರ್ಥಿಕತೆಯು ಪರಿಸರ ಮತ್ತು ಜ್ಞಾನದೊಂದಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಅರಿಯಲು ನೆರವಾಗಿವೆ ಎಂದು ಅಕಾಡೆಮಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

1895ರಿಂದ ನೊಬೆಲ್​ ಪ್ರಶಸ್ತಿಯನ್ನು ಕೊಡಲಾಗುತ್ತಿದೆಯಾದರೂ,1968ರಿಂದ ಅರ್ಥಶಾಸ್ತ್ರದ ಸಂಶೋಧನೆಗೆ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಈ ಪ್ರಶಸ್ತಿಯು 10 ಲಕ್ಷ ಅಮೆರಿಕನ್‌ ಡಾಲರ್‌ ಬಹುಮಾನವನ್ನು ಒಳಗೊಂಡಿದೆ.