ಅಮೆರಿಕದ ರೆಗ್ಯುಲೇಟರಿ ಕಮಿಷನ್‌ (ಶಕ್ತಿ ನಿಯಂತ್ರಣ ಆಯೋಗ) ಮುಖ್ಯಸ್ಥರಾಗಿ ಭಾರತ ಮೂಲದ “ನೀಲ್‌ ಚಟರ್ಜಿ” ನೇಮಕ

0
266

ಮಹತ್ವದ ಫೆಡರಲ್ ಎನರ್ಜಿ ರೆಗ್ಯುಲೇಟರಿ ಕಮಿಷನ್‌ (ಶಕ್ತಿ ನಿಯಂತ್ರಣ ಆಯೋಗ) ಮುಖ್ಯಸ್ಥರನ್ನಾಗಿ ಭಾರತೀಯ ಸಂಜಾತ ನೀಲ್ ಚಟರ್ಜಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ವಾಷಿಂಗ್ಟನ್ (ಪಿಟಿಐ):ಅಮೆರಿಕದ ಮಹತ್ವದ ಫೆಡರಲ್ ಎನರ್ಜಿ ರೆಗ್ಯುಲೇಟರಿ ಕಮಿಷನ್‌ (ಶಕ್ತಿ ನಿಯಂತ್ರಣ ಆಯೋಗ) ಮುಖ್ಯಸ್ಥರನ್ನಾಗಿ ಭಾರತೀಯ ಸಂಜಾತ ನೀಲ್ ಚಟರ್ಜಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. 

ಶಕ್ತಿ ನಿಯಂತ್ರಣ ಆಯೋಗವು ಅಂತರರಾಜ್ಯ ವಿದ್ಯುತ್‌, ನೈಸರ್ಗಿಕ ಅನಿಲ ಹಾಗೂ ತೈಲ ಪೂರೈಕೆ ಪ್ರಕ್ರಿಯೆಗಳನ್ನು ನಿರ್ವಹಿಸುತ್ತದೆ. ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದ ಕೆವಿನ್ ಮೆಕಿಂಟೈರ್ ಅವರ ಸ್ಥಾನವನ್ನು ಇವರು ತುಂಬಲಿದ್ದಾರೆ. 

 ನೀಲ್ ಅವರು ಆಯೋಗದ ಮುಖ್ಯಸ್ಥರಾಗಿ ಕಳೆದ ವರ್ಷ ಕೆಲ ಸಮಯ ಕೆಲಸ ಮಾಡಿದ್ದರು. ಈಗ ಮತ್ತೆ ಟ್ರಂಪ್ ಅವರಿಂದ ನೇಮಕಗೊಂಡಿದ್ದಾರೆ. 50 ವರ್ಷಗಳ ಹಿಂದೆ ಇವರು ಕೋಲ್ಕತ್ತದಿಂದ ಅಮೆರಿಕಕ್ಕೆ ಬಂದಿದ್ದರು. ವಕೀಲ, ರಾಜಕೀಯ ಸಲಹೆಗಾರರೂ ಆಗಿರುವ ಇವರು, ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.