ಅಮೆರಿಕದ ಪ್ರೊ.ರಿಚರ್ಡ್‌ ಎಚ್‌ ಥೇಲರ್‌ಗೆ ಅರ್ಥಶಾಸ್ತ್ರ ನೊಬೆಲ್‌

0
26

ಈ ಸಾಲಿನ ಅರ್ಥಶಾಸ್ತ್ರ ವಿಜ್ಞಾನ ನೊಬೆಲ್‌ ಪ್ರಶಸ್ತಿಗೆ ಅಮೆರಿಕದ ಪ್ರೊ.ರಿಚರ್ಡ್‌ ಎಚ್‌ ಥೇಲರ್‌ ಆಯ್ಕೆಯಾಗಿದ್ದಾರೆ.

‘ಬಿಹೇವಿಯರಲ್‌ ಎಕನಾಮಿಕ್ಸ್‌’ (ತೆಗೆದುಕೊಳ್ಳುವ ನಿರ್ಣಯ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ) ಸಂಬಂಧಿಸಿದ ಕೊಡುಗೆಯನ್ನು ಪರಿಗಣಿಸಿ ರಿಚರ್ಡ್‌ ಎಚ್‌ ಥೇಲರ್‌ ಅವರನ್ನು ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಥೇಲರ್‌, ಅರ್ಥಶಾಸ್ತ್ರ ಹಾಗೂ ಮನಃಶಾಸ್ತ್ರ ಸಂಯೋಜನೆಯೊಂದಿಗೆ ವಿಶ್ಲೇಷಣೆ ನಡೆಸಿದ್ದಾರೆ.

ಸೀಮಿತ ವಿಚಾರ ಶಕ್ತಿ, ಸಾಮಾಜಿಕ ಆದ್ಯತೆ ಹಾಗೂ ಸ್ವನಿಯಂತ್ರಣದಲ್ಲಿ ಕೊರತೆಯಿಂದಾಗಿ ವೈಯಕ್ತಿಕ ನಿರ್ಧಾರದ ಜತೆಗೆ ಮಾರುಕಟ್ಟೆ ಫಲಿತಾಂಶದ ಮೇಲೂ ಪ್ರಭಾವ ಬೀರಬಲ್ಲದು ಎಂಬುದನ್ನು ಸಂಶೋಧಿಸಿದ್ದಾರೆ.

ನೊಬೆಲ್‌ ಅರ್ಥಶಾಸ್ತ್ರ ಪ್ರಶಸ್ತಿ ₹7.19 ಕೋಟಿ(1.1 ) ಮೊತ್ತವನ್ನು ಒಳಗೊಂಡಿದೆ.